ಭಾರತ ತಂಡಕ್ಕೆ ಮತ್ತೆ ಸೌರವ್ ಗಂಗೂಲಿ ನಾಯಕ!

ಶುಕ್ರವಾರ, 12 ಆಗಸ್ಟ್ 2022 (16:34 IST)
ಮುಂಬೈ: ಟೀಂ ಇಂಡಿಯಾದ ಯಶಸ್ವೀ ನಾಯಕರೆನಿಸಿಕೊಂಡಿದ್ದ ಸೌರವ್ ಗಂಗೂಲಿ ಮತ್ತೆ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ!

75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ನ ಎರಡನೇ ಆವೃತ್ತಿಯ ಪಂದ್ಯ ನಡೆಯಲಿದ್ದು, ವಿಶ್ವ ದಿಗ್ಗಜ ಕ್ರಿಕೆಟಿಗರ ತಂಡದ ವಿರುದ್ಧ ಭಾರತದ ಇಂಡಿಯ ಮಹಾರಾಜಸ್ ತಂಡ ಪಂದ್ಯವಾಡಲಿದೆ.

ಈ ಪಂದ್ಯ ಕೋಲ್ಕೊತ್ತಾದ ಈಡನ್ ಗಾರ್ ಡನ್ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ತಂಡವನ್ನು ಗಂಗೂಲಿ ಮುನ್ನಡೆಸಲಿದ್ದಾರೆ. ವಿಶ್ವ ದಿಗ್ಗಜರ ತಂಡವನ್ನು ಇಯಾನ್ ಮಾರ್ಗನ್ ಮುನ್ನಡೆಸಲಿದ್ದಾರೆ. ಭಾರತದ ಪರ ಒಟ್ಟು 17 ಆಟಗಾರರು ಆಯ್ಕೆಯಾಗಿದ್ದು ಆ ತಂಡದಲ್ಲಿ ಗಂಗೂಲಿ ಜೊತೆಗೆ ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಕೈಫ್, ಯೂಸುಫ್ ಪಠಾಣ್, ಸುಬ್ರಮಣಿಯನ್ ಬದರಿನಾಥ್, ಇರ್ಫಾನ್ ಪಠಾಣ್, ಪಾರ್ಥಿವ್ ಪಟೇಲ್, ಸ್ಟುವರ್ಟ್ ಬಿನ್ನಿ,  ಎಸ್. ಶ್ರೀಶಾಂತ್, ಹರ್ಭಜನ್ ಸಿಂಗ್, ನಮನ್ ಓಝಾ, ಅಶೋಕ್ ದಿಂಡಾ, ಪ್ರಗ್ಯಾನ್ ಓಝಾ, ಅಜಯ್ ಜಡೇಜಾ, ಆರ್ ಪಿ ಸಿಂಗ್, ಜೊಗಿಂದರ್ ಶರ್ಮಾ, ರಿತೀಂದರ್ ಸಿಂಗ್ ಸೋಧಿ ಆಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ