ಸೆಹ್ವಾಗ್ ಯಾಕೆ ಕೋಚ್ ಹುದ್ದೆಗೆ ಆಯ್ಕೆಯಾಗಲಿಲ್ಲ ಗೊತ್ತೇ?!

ಬುಧವಾರ, 12 ಜುಲೈ 2017 (09:43 IST)
ಮುಂಬೈ: ಟೀಂ ಇಂಡಿಯಾ ಕೋಚ್ ಹುದ್ದೆಗೆ ಸೆಹ್ವಾಗ್ ಮತ್ತು ರವಿಶಾಸ್ತ್ರಿ ಮಧ್ಯೆ ಪೈಪೋಟಿಯಿತ್ತು. ಕೊನೆಗೆ ರವಿಶಾಸ್ತ್ರಿಯೇ ಆಯ್ಕೆಯಾದರು. ಆದರೆ ಸೆಹ್ವಾಗ್ ರನ್ನು ಯಾಕೆ ಕಡೆಗಣಿಸಲಾಯಿತು ಎನ್ನುವುದಕ್ಕೆ ಕಾರಣಗಳು ಹುಟ್ಟಿಕೊಳ್ಳುತ್ತಿವೆ.


ಕೋಚ್ ಆಗಲು ಸ್ವತಃ ವೀರೇಂದ್ರ ಸೆಹ್ವಾಗ್ ಗೇ ಇಷ್ಟವಿರಲಿಲ್ಲ ಎಂಬುದು ಮೊದಲ ಕಾರಣ. ಬಿಸಿಸಿಐ ಅಧಿಕಾರಿಯೊಬ್ಬರ ಒತ್ತಾಯದ ಮೇರೆಗೆ ಸೆಹ್ವಾಗ್ ಅರ್ಜಿ ಹಾಕಿದ್ದರು. ಆದರೂ ಚೆನ್ನಾಗಿಯೇ ಸಂದರ್ಶನ ನೀಡಿದ್ದ ಸೆಹ್ವಾಗ್ ಬಗ್ಗೆ ಆಯ್ಕೆಗಾರರೂ ಇಂಪ್ರೆಸ್ ಆಗಿದ್ದರು ಎನ್ನಲಾಗಿದೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ವಿಚಾರಗಳಿಗೂ ಬೋಲ್ಡ್ ಆಗಿ ಪ್ರತಿಕ್ರಿಯಿಸುವ ಸೆಹ್ವಾಗ್ ಬಗ್ಗೆ ಬಿಸಿಸಿಐಯಲ್ಲಿ ಕೆಲವರಿಗೆ ಕೊಂಚ ಭಯವಿತ್ತು ಎನ್ನಲಾಗಿದೆ. ಅದೂ ಅಲ್ಲದೆ, ಕುಂಬ್ಳೆ-ಕೊಹ್ಲಿ ಕದನದ ನಂತರ ನಾಯಕನ ಇಷ್ಟದ ವ್ಯಕ್ತಿಗೇ ಮಣೆ ಹಾಕಲು ಕ್ರಿಕೆಟ್ ಸಲಹಾ ಸಮಿತಿ ನಿರ್ಧರಿಸಿತ್ತು ಎನ್ನಲಾಗಿದೆ.

ರವಿ ಶಾಸ್ತ್ರಿ ಆಯ್ಕೆಯಾಗುವುದು ವೈಯಕ್ತಿಕ ಕಾರಣಗಳಿಗೆ ಗಂಗೂಲಿಗೆ ಬೇಕಾಗಿರಲಿಲ್ಲವಾದರೂ, ಉಳಿದಿಬ್ಬರು ಸದಸ್ಯರಿಗೆ ರವಿಶಾಸ್ತ್ರಿ ಬಗ್ಗೆ ಒಲವಿತ್ತು ಎನ್ನಲಾಗಿದೆ. ಹೀಗಾಗಿ ಅಂತಿಮವಾಗಿ ರವಿಶಾಸ್ತ್ರಿ ಜತೆಗೆ ಜಹೀರ್ ಖಾನ್ ಮತ್ತು ದ್ರಾವಿಡ್ ಗೂ ಜವಾಬ್ದಾರಿ ವಹಿಸಲಾಯಿತು.

ಇದನ್ನೂ ಓದಿ.. ಕಿಚ್ಚ ಸುದೀಪ್ ಮಾಡಿದ ಭೀಷ್ಮ ಪ್ರತಿಜ್ಞೆ ಏನದು?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ