ವಿಂಬಲ್ಡನ್: ರೋಹಣ್ ಬೋಪಣ್ಣಾ- ಖುರೇಶಿ ಸವಾಲ್ ಅಂತ್ಯ

ಬುಧವಾರ, 2 ಜುಲೈ 2014 (17:24 IST)
ಭಾರತದ ರೋಹನ್‌ ಬೋಪಣ್ಣಾ ಮತ್ತು ಪಾಕಿಸ್ತಾನದ ಐಸಾಮ್‌‌ ಉಲ್‌ ಹಕ್ ಖುರೇಶಿ ಜೋಡಿ ವಿಂಬಲ್ಡನ್‌‌ ಪಂದ್ಯಾವಳಿಯ ಎರಡನೇ ಸುತ್ತಿನ ಪಂದ್ಯದಲ್ಲಿ ವಾಸೆಕ್‌‌‌ ಪೋಸ್ಪಿಸಿಲ್‌ ಮತ್ತು ಜೆಕ್‌‌‌‌ ಸೋಕ್‌ ರಿಂದ ಸೋತು ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. 
 
ಎರಡು ದಿನಗಳವರೆಗೆ ನಡೆದ ಪಂದ್ಯದಲ್ಲಿ ಬೋಪಣ್ಣಾ ಮತ್ತು ಖುರೇಶಿಗೆ  7-6, 6-7, 3-6, 6-4, 5-7  ಸೆಟ್‌‌‌ಗಳ ಅಂತರದಿಂದ ಸೋಲುವಂತಾಯಿತು. 
 
ಪುರುಷ ಡಬಲ್ಸ್‌‌‌‌ನಲ್ಲಿ ಭಾರತದ ಲಿಯಾಂಡರ್‌ ಪೇಸ್‌‌ ಮಾತ್ರ ಉಳಿದಿದ್ದಾರೆ. ದಿವಿಜ್‌ ಶರಣ್‌ ಮತ್ತು ಪುರಬ್‌‌‌ ರಾಜಾ ಮೊದಲ ಸುತ್ತಿನಲ್ಲಿಯೇ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ. 
 
ಬೋಪಣ್ಣಾ ಮತ್ತು ಖುರೇಶಿ ಇದಕ್ಕೂ ಮೊದಲು ಫ್ರೆಂಚ್‌‌‌ ಓಪನ್‌‌‌‌‌‌‌ನಲ್ಲಿ ಎರಡನೇ ಸುತ್ತಿನಲ್ಲಿ ಸೋಲನ್ನು ಅನುಭವಿಸಿದ್ದರು ಮತ್ತು ಆಸ್ಟ್ರೇಲಿಯಾ ಓಪನ್‌‌‌ನಲ್ಲಿ ಮೂರನೇ ಸುತ್ತಿನವರೆಗೆ ತಲುಪಿದ್ದರು.

ವೆಬ್ದುನಿಯಾವನ್ನು ಓದಿ