ವೈವಾಹಿಕ ಜೀವನಕ್ಕೆ ಕಾಲಿಟ್ಟ ಯಜುವೇಂದ್ರ ಚಾಹಲ್

ಬುಧವಾರ, 23 ಡಿಸೆಂಬರ್ 2020 (09:00 IST)
ಮುಂಬೈ: ಕ್ರಿಕೆಟಿಗ ಯಜುವೇಂದ್ರ ಚಾಹಲ್ ತಮ್ಮ ಬಹುಕಾಲದ ಗೆಳತಿ ಧನಶ್ರೀ ವರ್ಮ ಜತೆ ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

 

ತಮ್ಮ ಮದುವೆ ಫೋಟೋವನ್ನು ಚಾಹಲ್ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದು ತಾವು ಈ ದಿನ ಧನಶ್ರೀ ಜೊತೆ ಜೊತೆಯಾಗಿರಲು ನಿರ್ಧರಿಸಿರುವುದಾಗಿ ಬರೆದುಕೊಂಡಿದ್ದಾರೆ. ಇನ್ನು, ಕ್ರಿಕೆಟಿಗರಾದ ಶಿಖರ್ ಧವನ್, ಸುರೇಶ್ ರೈನಾ ಸೇರಿದಂತೆ ಅಭಿಮಾನಿಗಳೂ ಈ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ