ಟೀಂ ಇಂಡಿಯಾ ಸೋತರೂ ವಿರಾಟ್ ಕೊಹ್ಲಿ ಸಾಧನೆ

ಸೋಮವಾರ, 21 ಡಿಸೆಂಬರ್ 2020 (09:52 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ ಹೀನಾಯವಾಗಿ ಸೋತರೂ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಶ್ರೇಯಾಂಕದಲ್ಲಿ ಚೇತರಿಕೆ ಕಂಡಿದ್ದಾರೆ.


ಸದ್ಯಕ್ಕೆ ಸ್ಟೀವ್ ಸ್ಮಿತ್ 901 ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ. ಆದರೆ ಮೊದಲ ಟೆಸ್ಟ್ ನಲ್ಲಿ ಸ್ಮಿತ್ ಬ್ಯಾಟಿಂಗ್ ನಲ್ಲಿ ವಿಫಲರಾಗಿದ್ದರು. ಆದರೆ ಕೊಹ್ಲಿ ಅರ್ಧಶತಕ ಸಿಡಿಸಿದ್ದರು. ಹೀಗಾಗಿ 2 ಅಂಕ ಹೆಚ್ಚಿಸಿಕೊಂಡಿರುವ ಕೊಹ್ಲಿ 888 ಅಂಕ ಗಳಿಸಿದ್ದಾರೆ. ಹೀಗಾಗಿ ಅಗ್ರ ಪಟ್ಟಕ್ಕೇರಲು ಕೊಹ್ಲಿ ಕೆಲವೇ ಅಂಕಗಳ ಅಂತರದಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ