ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗುವುದನ್ನು ತಪ್ಪಿಸಿಕೊಂಡ ಜಹೀರ್ ಖಾನ್!
ಬುಧವಾರ, 23 ನವೆಂಬರ್ 2016 (12:07 IST)
ಮುಂಬೈ: ಎಲ್ಲಾ ಸರಿಯಾಗಿದ್ದರೆ ಮಾಜಿ ವೇಗಿ ಜಹೀರ್ ಖಾನ್ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಬೇಕಿತ್ತು. ಆದರೆ ಬಿಸಿಸಿಐಗೆ ಅವರು ಬೇಡಿಕೆಯಿಟ್ಟ ವೇತನ ಮತ್ತು ಒಪ್ಪಂದಗಳು ಒಪ್ಪಿಗೆಯಾಗದೇ ಇರುವುದರಿಂದ ಕೈ ತಪ್ಪಿ ಹೋಗಿದೆ.
ಒಂದು ವೇಳೆ ಜಹೀರ್ ಆಯ್ಕೆಯಾಗಿದ್ದರೆ, ಭಾರತ ತಂಡದಲ್ಲಿ ಮತ್ತೆ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ವೇಗಿ ಜಹೀರ್ ಖಾನ್ ಜೋಡಿ ಮೋಡಿ ಮಾಡುತ್ತಿತ್ತೇನೋ. ಅದೀಗ ಕೈ ತಪ್ಪಿ ಹೋಗಿದೆ. ಜಹೀರ್ ವರ್ಷಷವಿಡೀ ತಂಡದೊಂದಿಗೆ ಕೆಲಸ ಮಾಡಲು ಸಿದ್ಧರಿರಲಿಲ್ಲ. 100 ದಿನಗಳಿಗೆ 4 ಕೋಟಿ ರೂ. ಕೇಳಿದ್ದರು. ಹೀಗಾಗಿ ಬಿಸಿಸಿಐ ಅವರ ಬೇಡಿಕೆಯನ್ನು ಪುರಸ್ಕರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.
ಮುಖ್ಯ ಕೋಚ್ ಅನಿಲ್ ಕುಂಬ್ಳೆ ಕೂಡಾ ತಮ್ಮ ಯುವ ವೇಗಿಗಳಿಗೆ ಪಾಠ ಹೇಳಲು ಜಹೀರ್ ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರಂತೆ. ಭಾರತದ ಪರ 92 ಟೆಸ್ಟ್ ಪಂದ್ಯವಾಡಿರುವ ರಿವರ್ಸ್ ಸ್ವಿಂಗ್ ಮಾಂತ್ರಿಕ ಜಹೀರ್ ಭಾರತದ ಹೆಚ್ಚಿನ ಯುವ ವೇಗಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಹೀಗಾಗಿ ಅವರ ಮಾರ್ಗದರ್ಶನದಲ್ಲಿ ಯುವ ವೇಗಿಗಳ ಪಡೆ ಪ್ರದರ್ಶನ ಸುಧಾರಿಸಬಹುದು ಎಂಬುದು ಟೀಂ ಇಂಡಿಯಾ ಲೆಕ್ಕಾಚಾರವಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ