ಅಬ್ಬಾ..! ಕಾರಿನಲ್ಲಿ ಇತ್ತು 10 ಅಡಿ ಉದ್ದದ ಕಾಳಿಂಗ ಸರ್ಪ..

ಮಂಗಳವಾರ, 20 ಜೂನ್ 2017 (14:35 IST)
ಬೀಜಿಂಗ್: ಮನೆ ಏಸಿಯೊಳಗೆ ಹಾವೊಂದು ಸೇರಿಕೊಂದು ಇಲಿ ತಿನ್ನುತ್ತಿದ್ದ ಬಗ್ಗೆ ಇತ್ತೀಚೆಗೆ ಕೇಳಿದ್ದೆವು. ಆದರೆ ಕಾರಿನ ಎಂಜಿನ್ ಒಳಗೆ ಹಾವೊಂದು ಸೇರಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ. ಅದೂ ಅಂತಿಂಥ ಹಾವಲ್ಲ ಹತ್ತು ಅಡಿ ಉದ್ದದ ಕಾಳಿಮ್ಗ ಸರ್ಪ.
 
ಕಾರಿನ ಎಂಜಿನಲ್ಲಿ ಸೇರಿಕೊಂಡಿದ್ದ ಈ ಬೃಹದಾಕಾರದ ಕಾಳಿಂಗ ಸರ್ಪವನ್ನು ಪೊಲೀಸರು ಪ್ರಯಾಸ ಪಟ್ಟು ಹೊರತೆಗಿದ್ದಿದ್ದಾರೆ. ಈ ಹಾವು 4.6 ಕೆಜಿ ತೂಕವಿದ್ದು, ಪೊಲೀಸರು ಹಾವನ್ನು ಒಯ್ಯಲು ತಂದಿದ್ದ ಚೀಲದಲ್ಲಿ ಇದನ್ನು ತೂರಿಸಲೂ ಸಾಧ್ಯವಾಗದೇ ಪರದಾಡಿದ್ದಾರೆ.
 
ಹತ್ತು ಅಡಿ ಉದ್ದದ ಕಾಳಿಂಗ ಕಾರ್ ಎಂಜಿನ್ ನಿಂದ ಪೊಲೀಸರು ಹರಸಾಹಸ ಪಟ್ಟು ಹೊರತೆಗೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾನಗಳಲ್ಲಿ ವೈರಲ್ ಆಗಿದೆ.
 

ವೆಬ್ದುನಿಯಾವನ್ನು ಓದಿ