ಬೆಂಗಳೂರು: ಎರಡು ವರ್ಷಗಳ ಹಿಂದೆ ಬೆಂಬಲಿಗರ ಜೊತೆ ಕೆಜಿಗಟ್ಟಲೆ ಕೇಕ್ ಕತ್ತರಿಸುತ್ತಿದ್ದ ಪ್ರಜ್ವಲ್ ರೇವಣ್ಣ ಈ ಬಾರಿಯೂ ಒಬ್ಬಂಟಿಯಾಗಿ ಕಂಬಿ ಎಣಿಸುತ್ತಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಇಂದು 35 ನೇ ಜನ್ಮದಿನ. ಕಳೆದ ಬಾರಿಯೂ ಅವರು ಜೈಲಿನಲ್ಲಿದ್ದ ಕಾರಣ ಹುಟ್ಟುಹಬ್ಬವಿರಲಿಲ್ಲ. ಈ ಬಾರಿಯಾದರೂ ಜಾಮೀನು ಪಡೆದು ಹೊರಬರಬಹುದು ಎಂಬ ವಿಶ್ವಾಸದಲ್ಲಿದ್ದರು. ಜಾಮೀನು ಬಿಡಿ, ಈಗ ಶಿಕ್ಷೆ ಪ್ರಮಾಣವೇ ಪ್ರಕಟವಾಗಿದ್ದು ಜೀವನಪರ್ಯಂತ ಕಂಬಿ ಎಣಿಸುವ ಪರಿಸ್ಥಿತಿ ಬಂದಿದೆ.
ಇಷ್ಟು ದಿನ ಹುಟ್ಟುಹಬ್ಬ ಎಂದರೆ ತಮ್ಮ ಅಭಿಮಾನಿಗಳು, ಬೆಂಬಲಿಗರ ಜೊತೆ ಭರ್ಜರಿ ಹುಟ್ಟುಹಬ್ಬ ಆಚರಿಸುತ್ತಿದ್ದ ಪ್ರಜ್ವಲ್ ಇದೀಗ ಹುಟ್ಟುಹಬ್ಬ ಆಚರಿಸುವ ಪರಿಸ್ಥಿತಿಯಲ್ಲೂ ಇಲ್ಲ. ತಮ್ಮ ಭವಿಷ್ಯವೇನು ಎಂದು ಆತಂಕದಲ್ಲಿ ಜೈಲಿನ ಕೊಠಡಿಯಲ್ಲಿ ಕಳೆಯುವಂತಾಗಿದೆ.
ಮನೆಗೆಲಸದಾಕೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಪ್ರಜ್ವಲ್ ಗೆ ಜೀವನಪರ್ಯಂತ ಶಿಕ್ಷೆ ಪ್ರಕಟವಾಗಿದೆ. ಅವರ ಮೇಲೆ ಇನ್ನೂ ಮೂರು ಅತ್ಯಾಚಾರ ಪ್ರಕರಣಗಳಿವೆ. ಹೀಗಾಗಿ ಸದ್ಯಕ್ಕೆ ಅವರು ಹುಟ್ಟುಹಬ್ಬದ ಬಗ್ಗೆ ಯೋಚನೆ ಮಾಡುವ ಸ್ಥಿತಿಯಲ್ಲೂ ಇಲ್ಲ.