ಬೆಂಗಳೂರಿನಲ್ಲಿ ಎರಡು ದಿನ 12ನೇ ಆವೃತ್ತಿಯ ಕಾಮಿಕ್ ಕಾನ್ ಇಂಡಿಯಾ

Krishnaveni K

ಗುರುವಾರ, 9 ಜನವರಿ 2025 (16:04 IST)
ಬೆಂಗಳೂರು: ಪಾಪ್ ಸಂಸ್ಕೃತಿ ಎಲ್ಲೆಡೆ ಹಬ್ಬಿರುವ ಈ ಸಂದರ್ಭದಲ್ಲಿ ಭಾರತದ ಕಾಮಿಕ್, ಮಂಗಾ, ಅನಿಮೆ ಮತ್ತು ಸೂಪರ್‌ಹೀರೋ ಸಿನಿಮಾ ಅಭಿಮಾನಿಗಳಿಗೆ 2025 ಏನನ್ನು ಕಾಯ್ದಿರಿಸಿಕೊಂಡಿದೆ ಎಂಬ ಕುತೂಹಲ ಇದೀಗ ಗರಿಗೆದರಿದೆ. ಈ ನಿರೀಕ್ಷೆಯನ್ನು ಉತ್ತುಂಗಕ್ಕೆ ಏರಿಸಲು ಉಪಖಂಡದ ಅತಿದೊಡ್ಡ ಪಾಪ್ ಸಂಸ್ಕೃತಿಯ ಸಂಭ್ರಮಾಚರಣೆಯಾದ ಕಾಮಿಕ್ ಕಾನ್ ಇಂಡಿಯಾದ ಬಹು ನಿರೀಕ್ಷಿತ 12ನೇ ಆವೃತ್ತಿಯು ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.

ಈ ಬಹು ನಿರೀಕ್ಷಿತ ಕಾರ್ಯಕ್ರಮವು ವೈಟ್‌ಫೀಲ್ಡ್‌ ನಲ್ಲಿರುವ ಕೆಟಿಪಿಓ ಸಭಾಂಗಣದಲ್ಲಿ ಜನವರಿ 18 ಮತ್ತು 19 ರಂದು ಎರಡು ದಿನಗಳ ಕಾಲ ನಡೆಯಲಿದೆ. ಮಾರುತಿ ಸುಜುಕಿ ಅರೆನಾದಲ್ಲಿ ನಡೆಯಲಿರುವ ಬೆಂಗಳೂರು ಕಾಮಿಕ್ ಕಾನ್ ಅನ್ನು ಕ್ರಂಚಿ ರೋಲ್ ಸಹಭಾಗಿತ್ವದಲ್ಲಿ ನಡೆಯಲಿದೆ. ಈ ಸಲ ಹಿಂದೆಂದಿಗಿಂತಲೂ ದೊಡ್ಡದಾಗಿ, ವರ್ಣರಂಜಿತವಾಗಿ ಮತ್ತು ಹೆಚ್ಚು ರೋಮಾಂಚನಕಾರಿಯಾಗಿ ಕಾರ್ಯಕ್ರಮ ನಡೆಯಲಿದೆ.

ಈ ವರ್ಷ ಬೆಂಗಳೂರು ಕಾಮಿಕ್ ಕಾನ್‌ ಪ್ರವೇಶ ಸಂದರ್ಭದಲ್ಲಿ ಪ್ರತಿಯೊಬ್ಬರು ಇಮೇಜ್ ಕಾಮಿಕ್ಸ್‌ ನ ರೇಡಿಯಂಟ್ ಬ್ಲ್ಯಾಕ್‌ ನ ನಂ. 1 ಸಂಚಿಕೆಯನ್ನು ಮತ್ತು ಯೆನ್ ಪ್ರೆಸ್‌ ನ ವಿಶೇಷ ಸೋಲೋ ಲೆವೆಲಿಂಗ್ ಪೋಸ್ಟರ್ ಅನ್ನು ಪಡೆಯಬಹುದು. ಜೊತೆಗೆ ವಿಶೇಷ ಟೋಕನ್‌ ನಂತೆ ಕಾಮಿಕ್ ಕಾನ್ ಇಂಡಿಯಾ ಬ್ಯಾಗ್ ಅನ್ನು ಹೊಂದಬಹುದು. ಸೂಪರ್‌ಫ್ಯಾನ್ಸ್‌ ಸಲುವಾಗಿ ಕಾಮಿಕ್ ಕಾನ್ ಇಂಡಿಯಾ ಸೀಮಿತ ಆವೃತ್ತಿಯ ಬಾಕ್ಸ್ ಸೆಟ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಮಾರ್ವೆಲ್‌ನ ಡಾ ಡೂಮ್ ಬಸ್ಟ್‌ ಗಳು, ಡೆಡ್‌ ಪೂಲ್-ವೊಲ್ವೆರಿನ್ ಟಿ-ಶರ್ಟ್‌ಗಳು ಮತ್ತು ಕೀಚೈನ್‌ ಗಳು, ಎಕ್ಸ್‌ ಕ್ಲೂಸಿವ್ ಕಾಮಿಕ್ ಕಾನ್ ಇಂಡಿಯಾ ಪಜಲ್ಸ್, ಹೀರೋಯಿಕ್ ಕೇಪ್‌ ಗಳು ಮತ್ತು ಇನ್ನೂ ಅನೇಕ ಆಸಕ್ತಿಕರ ವಸ್ತುಗಳನ್ನು ನೀಡಲಾಗುತ್ತದೆ.

ನೋಡ್ವಿನ್ ಗೇಮಿಂಗ್‌ನ ಆಶ್ರಯದಲ್ಲಿ ನಡೆಯಲಿರುವ ಕಾಮಿಕ್ ಕಾನ್ ಇಂಡಿಯಾದ ಈ ಎರಡು ದಿನಗಳ ಸಂಭ್ರಮಾಚರಣೆಯಲ್ಲಿ ಇಂಡಸ್ ವರ್ಸ್, ಯಾಲಿ ಡ್ರೀಮ್ಸ್ ಕ್ರಿಯೇಷನ್ಸ್, ಗ್ರಾಫಿಕರಿ -ಪ್ರಸಾದ್ ಭಟ್, ಗಾರ್ಬೇಜ್ ಬಿನ್, ಸೂಫಿ ಕಾಮಿಕ್ಸ್, ಬುಲ್ಸ್ ಐ ಪ್ರೆಸ್, ಹೋಲಿ ಕೌ ಎಂಟರ್ ಟೇನ್ಮೆಂಟ್, ಬಕರ್ಮ್ಯಾಕ್ಸ್, ಆರ್ಟ್ ಆಫ್ ಸೇವಿಯೋ, ತಡಮ್ ಗ್ಯಾಡು, ಸೋಮೇಶ್ ಕುಮಾರ್, ರಾಜೇಶ್ ನಾಗುಲ್ಕೊಂಡ, ಆರ್ಟ್ ಆಫ್ ರೋಶನ್, ಹಲ್ಲುಬೋಲ್, ಕಾರ್ಪೊರೇಟ್ ಕಾಮಿಕ್ಸ್, ಹ್ಯಾಪಿ ಫ್ಲಫ್ ಕಾಮಿಕ್ಸ್, ಮತ್ತು ಸೌಮಿನ್ ಪಟೇಲ್ ಮುಂತಾದ ಪ್ರಕಾಶನ ಸಂಸ್ಥೆಗಳು ಮತ್ತು ಭಾರತೀಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಹೆಚ್ಚುವರಿಯಾಗಿ, ಬ್ಯಾಟ್‌ಮ್ಯಾನ್/ಏಲಿಯೆನ್ಸ್, ಡಿಸಿ ವರ್ಸಸ್ ಮಾರ್ವೆಲ್, ಗ್ರೀನ್ ಲ್ಯಾಂಟರ್ನ್, ಸಿಲ್ವರ್ ಸರ್ಫರ್ ಮತ್ತು ವಿಚ್‌ಬ್ಲೇಡ್‌ನಂತಹ ಕೃತಿಗಳ ಕೃರ್ತ ಹೆಸರಾಂತ ಅಮೇರಿಕನ್ ಕಾಮಿಕ್ ಪುಸ್ತಕ ಬರಹಗಾರ ರಾನ್ ಮಾರ್ಜ್ ಅವರು ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿರಲಿದ್ದಾರೆ. ಸೂಪರ್‌ಗರ್ಲ್, ಫೈರ್‌ಸ್ಟಾರ್ಮ್, ಮೊಲ್ಲಿ ಡೇಂಜರ್ ಮತ್ತು ದಿ ರಾಂಗ್ ಅರ್ಥ್‌ ಕೃತಿಗಳನ್ನು ಕೊಟ್ಟ ನ್ಯೂಯಾರ್ಕ್ ಟೈಮ್ಸ್‌ ನ ಬೆಸ್ಟ್ ಸೆಲ್ಲರ್ ಬರಹಗಾರ ಮತ್ತು ಐಸ್ನರ್ ಪ್ರಶಸ್ತಿ ವಿಜೇತ ಕಾಮಿಕ್ ಪುಸ್ತಕ ಕಲಾವಿದ ಜಮಾಲ್ ಇಗ್ಲೆ ಕೂಡ ಇರುತ್ತಾರೆ.

ಈ ಇಬ್ಬರು ಉದ್ಯಮದ ದಂತಕಥೆಗಳು ವಿಶೇಷ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ತಮ್ಮ ವೃತ್ತಿಜೀವನದ ಒಳನೋಟಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಅಭಿಮಾನಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಕಾಮಿಕ್ ಉತ್ಸಾಹಿಗಳಿಗೆ ಇದು ನಿಜವಾಗಿಯೂ ಅವಿಸ್ಮರಣೀಯ ಅನುಭವವಾಗಲಿದೆ.

40000 ಚದರ ಅಡಿ ವಿಸ್ತೀರ್ಣದ ಗೇಮಿಂಗ್ ಪ್ರದೇಶವಾದ ದಿ ಅರೆನಾದಲ್ಲಿ ಹಲವಾರು ಚಟುವಟಿಕೆಗಳು ನಡೆಯಲಿವೆ. ಜನಪ್ರಿಯ ಸ್ಟ್ರೀಮರ್‌ಗಳು ಮತ್ತು ವಿಶೇಷ ಗೇಮಿಂಗ್ ಅನುಭವ ಇಲ್ಲಿ ಎದುರಾಗಲಿದೆ. ಇದರ ಜೊತೆ ಇನ್ನಿತರ ಆಕರ್ಷಕ ಕಾರ್ಯಕ್ರಮಗಳು ನಡೆಯಲಿವೆ.

ಈ ಕಾರ್ಯಕ್ರಮದಲ್ಲಿ ಹಲವು ಕಾರ್ಯಕ್ರಮ ಪ್ರದರ್ಶನ ಕೂಡ ನಡೆಯಲಿದೆ. ಅಭಿಮಾನಿಗಳು ಪಾಪ್ ಸಂಸ್ಕೃತಿಯ ಕುರಿತು ಎರಡು ದಿನಗಳ ಕಾಲ ಸಂಪೂರ್ಣ ಮನರಂಜನೆ ಹೊಂದಲಿದ್ದಾರೆ. ಜನಪ್ರಿಯ ಸ್ಟ್ಯಾಂಡ್-ಅಪ್ ಕಲಾವಿದರಾದ ರಾಹುಲ್ ಸುಬ್ರಮಣಿಯನ್, ಅಜೀಮ್ ಬನಾಟ್‌ವಾಲಾ, ಕ್ವಿಜಿಂಗ್ ವಿತ್ ಕೆವಿ - ಕುಮಾರ್ ವರುಣ್ ಮತ್ತು ದಿ ಇಂಟರ್‌ನೆಟ್ ಸೇಡ್ ಸೋ (ವರುಣ್ ಠಾಕೂರ್, ಕೌತುಕ್ ಶ್ರೀವಾಸ್ತವ್ ಮತ್ತು ಆಧಾರ್ ಮಲಿಕ್ ಅವರನ್ನು ಒಳಗೊಂಡಂತೆ) ತಮ್ಮ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ. ಎಂ.ಎ.ಡಿ. ಖ್ಯಾತಿಯ ಆರ್ಟ್ ಗೈ ರಾಬ್ ಮತ್ತು ರೋಹನ್ ಜೋಶಿ ಅವರು ತಮ್ಮ ಕಾರ್ಯಕ್ರಮದ ಮೂಲಕ ಅಭಿಮಾನಿಗಳನ್ನು ತಮ್ಮ ಬಾಲ್ಯಕ್ಕೆ ನೆನಪಿನ ಹಾದಿಯಲ್ಲಿ ಪ್ರವಾಸ ಕರೆದೊಯ್ಯಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗೀಕ್ ಫ್ರೂಟ್ ಬ್ಯಾಂಡ್ ಕೂಡ ಕಾರ್ಯಕ್ರಮ ನೀಡಲಿದ್ದು, ಅವರು ಪ್ರೇಕ್ಷಕರ ಹೃದಯವನ್ನು ಸೂರೆಗೊಳ್ಳಲಿದ್ದಾರೆ.

ಬೆಂಗಳೂರು ಕಾಮಿಕ್ ಕಾನ್ 2025 ರಲ್ಲಿ ಅಭಿಮಾನಿಗಳು ಮಾರುತಿ ಸುಜುಕಿ, ಯಮಹಾ, ಕ್ರಂಚಿರೋಲ್, ಯಮಹಾ ರೇಸಿಂಗ್, ಒನ್‌ಪ್ಲಸ್, ರೇಡಿಯೊ ಮಿರ್ಚಿ ಮತ್ತು ವಾರ್ನರ್ ಬ್ರದರ್ಸ್ ನಂತಹ ಹಲವು ವಿಶಿಷ್ಟ ಝೋನ್ ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದಾಗಿದೆ. ಗೀಕ್ ಶಾಪಿಂಗ್ ಅನುಭವವನ್ನು ಅಭಿಮಾನಿಗಳು ಹೊಂದಬಹುದಾಗಿದೆ. ನೆರ್ಡ್ ಅರೆನಾ, ರೆಡ್ ವುಲ್ಫ್, ಬಾಂಕರ್ಸ್ ಕಾರ್ನರ್ ಮತ್ತು ಟಾಪ್ಸ್‌ ನಂತಹ ಜನಪ್ರಿಯ ಬ್ರ್ಯಾಂಡ್‌ಗಳು ಇಲ್ಲಿ ಭಾಗವಹಿಸಲಿವೆ. ಪಾಲ್ಗೊಳ್ಳುವವರು ಕಾಮಿಕ್ಸ್, ಆಟಿಕೆಗಳು, ಉಡುಪುಗಳು, ಪರಿಕರಗಳು ಮತ್ತು ಇತ್ಯಾದಿಗಳ ವ್ಯಾಪಕ ಶ್ರೇಣಿಯನ್ನು ಅನ್ವೇಷಿಸಬಹುದು.

 
ಜನವರಿ 18 ಮತ್ತು 19 ರಂದು ಬೆಂಗಳೂರಿನ ವೈಟ್ ಫೀಲ್ಡ್ ನ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಕೆಟಿಪಿಓ ಟ್ರೇಡ್ ಸೆಂಟರ್ ನಲ್ಲಿ ನಡೆಯಲಿರುವ ಕಾಮಿಕ್ ಕಾನ್ 2025 ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಲು Insider.inಗೆ ಭೇಟಿ ನೀಡಿ!
ವೆಬ್‌ಸೈಟ್ ಲಿಂಕ್: www.comicconindia.com

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ