ಕರ್ನಾಟಕ ಹವಾಮಾನ ವರದಿ: ಈ ದಿನದವರೆಗೂ ಚಳಿ ಇನ್ನಷ್ಟು ತೀವ್ರ

Krishnaveni K

ಮಂಗಳವಾರ, 7 ಜನವರಿ 2025 (12:13 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಚಳಿ ತೀವ್ರವಾಗಿದ್ದು ಯಾವ ದಿನದಿಂದ ಯಾವ ದಿನದವರೆಗೆ ಚಳಿ ವಾತಾವರಣ ಮುಂದುವರಿಯಲಿದೆ ಎಂಬ ಹವಾಮಾನ  ವರದಿ ಇಲ್ಲಿದೆ.

ಈಗಾಗಲೇ ರಾಜ್ಯ ರಾಜಧಾನಿಯಲ್ಲಿ 18-15 ಡಿಗ್ರಿಯೊಳಗೆ ಕನಿಷ್ಠ ತಾಪಮಾನವಿದ್ದು ವಿಪರೀತ ಚಳಿಯ ವಾತಾವರಣವಿದೆ. ಈ ಚಳಿ ಇನ್ನಷ್ಟು ತೀವ್ರವಾಗಲಿದ್ದು ಮಕ್ಕಳು, ವಯೋ ವೃದ್ಧರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಬಹುದು.

ಹವಾಮಾನ  ವರದಿ ಪ್ರಕಾರ ಜನವರಿ 10 ರಿಂದ ಐದು ದಿನಗಳವರೆಗೆ ತೀವ್ರ ಚಳಿ ಕಂಡುಬರಲಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ದಾಖಲೆಯ ಕನಿಷ್ಠ ಮಟ್ಟಕ್ಕೆ ತಾಪಮಾನ ಇಳಿಕೆಯಾಗಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ.

ವಿಶೇಷವಾಗಿ ಕರ್ನಾಟಕದ ಉತ್ತರ ಭಾಗಗಳಲ್ಲಿ ಚಳಿ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣವಿದೆ. ಉತ್ತರ ಕನ್ನಡ, ಬೀದರ್, ಕಲಬುರಗಿ, ಧಾರವಾಡ, ಹಾವೇರಿ, ರಾಯಚೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು ಮುಂತಾದ ಭಾಗಗಳಲ್ಲಿ ವಿಪರೀತ ಚಳಿಯ ವಾತಾವರಣ ಕಂಡುಬರಲಿದೆ.  ಈ ಭಾಗಗಳಲ್ಲಿ ಈ ವರ್ಷ ದಾಖಲೆಯ ಕನಿಷ್ಠ ತಾಪಮಾನ ದಾಖಲಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ