ಬೆಂಗಳೂರು: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಭಾರೀ ಚಳಿಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆ ಐದು ಜಿಲ್ಲೆಗಳು ಯಾವುವು ಇಲ್ಲಿದೆ ವಿವರ.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಈಗಾಗಲೇ ಚಳಿಯ ವಾತಾವರಣವಿದೆ. ಆದರೆ ಇನ್ನು ಐದು ದಿನ ಸಾಮಾನ್ಯವಾಗಿರುವುದಕ್ಕಿಂತಲೂ 4 ಡಿಗ್ರಿ ಸೆಲ್ಸಿಯಷ್ಟ್ ನಷ್ಟು ತಾಪಮಾನ ಕುಸಿತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ಕೆಲವು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಿಗೆ ತಾಪಮಾನ 10 ಡಿಗ್ರಿಗಿಂತಲೂ ಕಡಿಮೆಯಾಗುವ ಮುನ್ಸೂಚನೆ ನೀಡಲಾಗಿದೆ. ವಿಶೇಷವಾಗಿ ಗದಗ, ಕಲಬುರಗಿ, ಬೀದರ್ ನಲ್ಲಿ ದಾಖಲೆಯ ಕನಿಷ್ಠ ತಾಪಮಾನ ದಾಖಲಾಗಲಿದೆ.
ಇದಲ್ಲದೆ ಬೆಂಗಳೂರಿನಲ್ಲಿ ಈಗ ಕನಿಷ್ಠ ತಾಪಮಾನ 15 ಡಿಗ್ರಿಯಷ್ಟಿದ್ದು, ಮುಂದೆ ಇನ್ನೂ ಕುಸಿತವಾಗುವ ಸಾಧ್ಯತೆಯಿದೆ. ಉಳಿದಂತೆ ಬಾಗಲಕೋಟೆ, ಚಿಕ್ಕಮಗಳೂರು, ಹೊನ್ನಾವರ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿತವಾಗಲಿದ್ದು ವಿಪರೀತ ಚಳಿಯಿರಲಿದೆ.