ಡಾ ಸಿಎನ್ ಮಂಜುನಾಥ್ ಪ್ರಕಾರ ನಿಮ್ಮ ಮೆದುಳಿಗೆ ಬೆಸ್ಟ್ ಆಹಾರ ಯಾವುದು

Krishnaveni K

ಶನಿವಾರ, 30 ಆಗಸ್ಟ್ 2025 (09:20 IST)
ಸಾಮಾನ್ಯವಾಗಿ ನಮ್ಮ ಮೆದುಳು ಚುರುಕಾಗಿರಬೇಕು ಎಂದು ನಾವು ಏನೇನೋ ಆಹಾರ ಸೇವನೆ ಮಾಡುತ್ತೇವೆ. ಆದರೆ ಖ್ಯಾತ ವೈದ್ಯ ಡಾ ಸಿಎನ್ ಮಂಜುನಾಥ್ ನಮ್ಮ ಮೆದುಳಿಗೆ ಅತ್ಯುತ್ತಮವಾದ ಆಹಾರ ಯಾವುದು ಎಂದು ಸಂವಾದವೊಂದರಲ್ಲಿ ಹೀಗೆ ಹೇಳಿದ್ದಾರೆ.

ಮೆದುಳಿಗೆ ಉತ್ತಮ ಆಹಾರ ನಿಮ್ಮ ಯೋಚನೆ. ಯೋಚನೆ ಮಾತುಗಳಾಗುತ್ತವೆ, ಮಾತುಗಳು ಕ್ರಿಯೆಗಳಾಗುತ್ತವೆ, ಕ್ರಿಯೆಗಳು ಅಭ್ಯಾಸವಾಗುತ್ತದೆ, ಅಭ್ಯಾಸಗಳು ವ್ಯಕ್ತಿತ್ವವಾಗುತ್ತದೆ.


ವ್ಯಕ್ತಿತ್ವ ಗುರಿಯಾಗಿ ಬದಲಾಗುತ್ತದೆ. ನಿಮ್ಮ ಗುರಿ ನೀವು ಯಾವುದೇ ಕೆಲಸದಲ್ಲಿದ್ದರೂ ಅದರಿಂದ ಅತ್ಯುತ್ತಮ ಕ್ರಿಯಾತ್ಮಕತೆಯನ್ನು ಹೊರಹಾಕುತ್ತದೆ. ಹೀಗಾಗಿ ಯೋಚನೆಯಿಂದ ಗುರಿಯವರೆಗೆ ನೀವು ಏನು ಮಾಡುತ್ತೀರೋ ಅದು ನಿಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದಿದ್ದರು.

ನಾವು ಏನು ಆಹಾರ ಸೇವನೆ ಮಾಡುತ್ತೇವೆ ಎನ್ನುವುದಕ್ಕಿಂತ ನಮ್ಮ ಮೆದುಳಿಗೆ ಎಂಥಾ ಆಲೋಚನೆ ಕೊಡುತ್ತೇವೆ, ಎಂಥಾ ಮಾತುಗಳನ್ನು ಆಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಮ್ಮಲ್ಲಿ ಒಳ್ಳೆಯ ಆಲೋಚನೆ ಬರಲು ನಾವು ಮಾಡುವ ಕೆಲಸವೂ ಮುಖ್ಯವಾಗುತ್ತದೆ ಎಂದು ಅವರು ಈ ರೀತಿ ಸರಳವಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ