ಋತುಚಕ್ರ ಮುಂದೂಡಲು ಮಾತ್ರೆ ತೆಗೆದುಕೊಳ್ಳಬಹುದೇ, ಡಾ ಪದ್ಮಿನಿ ಪ್ರಸಾದ್ ಹೇಳಿದ್ದೇನು

Krishnaveni K

ಬುಧವಾರ, 29 ಅಕ್ಟೋಬರ್ 2025 (11:22 IST)
ಬೆಂಗಳೂರು: ಋತುಚಕ್ರ ಮುಂದೂಡಲು ಮಾತ್ರೆ ತೆಗೆದುಕೊಳ್ಳುವುದು ಉತ್ತಮವೇ ಎಂಬ ಬಗ್ಗೆ ಹಲವರಲ್ಲಿ ಜಿಜ್ಞಾಸೆಗಳಿವೆ. ಈ ಬಗ್ಗೆ ಖ್ಯಾತ ಸ್ತ್ರೀರೋಗ ತಜ್ಞೆ ಡಾ ಪದ್ಮಿನಿ ಪ್ರಸಾದ್ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು.

ಕೆಲವರು ಯಾವುದೋ ಅನಿವಾರ್ಯ ಕಾರಣಗಳಿಗೆ ಋತುಚಕ್ರವನ್ನು ಮುಂದೂಡಲೇಬೇಕಾದ ಅನಿವಾರ್ಯತೆಗೆ ಬರುತ್ತಾರೆ. ಅಂತಹ ಸಂದರ್ಭದಲ್ಲಿ ಮಾತ್ರೆ ತೆಗೆದುಕೊಳ್ಳುವುದರಿಂದ ಮುಂದೆ ಸಮಸ್ಯೆಯಾಗಬಹುದೇ ಎಂಬ ಆತಂಕ ಹಲವರಲ್ಲಿರುತ್ತದೆ.

ಕೆಲವೊಮ್ಮೆ ಯಾವುದೋ ಕಾರ್ಯಕ್ರಮವಿದೆ, ಋತುಚಕ್ರದ ಸಂದರ್ಭದಲ್ಲಿ ವಿಪರೀತ ನೋವು ಬರುತ್ತಿದ್ದರೆ, ಪರೀಕ್ಷೆಯಿದೆ ಇತ್ಯಾದಿ ಅನಿವಾರ್ಯ ಸಂದರ್ಭಗಳಲ್ಲಿ ಸ್ತ್ರೀರೋಗ ತಜ್ಞರ ಸಲಹೆ ಮೇರೆಗೆ ನೀವು ಅದಕ್ಕೆ ಸೂಕ್ತವಾದ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.

ಆದರೆ ಋತುಚಕ್ರ ಪ್ರಕ್ರಿಯೆಗೆ ಪದೇ ಪದೇ ಡಿಸ್ಟರ್ಬ್ ಆಗುತ್ತಿದ್ದರೆ ಅದೂ ಕೂಡಾ ಮಹಿಳೆಯರಲ್ಲಿ ಬೇರೆ ಸಮಸ್ಯೆಗಳಿಗೆ ಕಾರಣವಾಗಬಹುದು. ಗರ್ಭಕೋಶದಲ್ಲಿ ಗಡ್ಡೆ, ಫೈಬ್ರಾಯ್ಡ್ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇಂತಹ ಅನಿಯಂತ್ರಿತ ಮುಟ್ಟು, ಅನಿಯಂತ್ರಿತ ಸ್ರಾವ ಸಮಸ್ಯೆಗೆ ಕಾರಣವಾಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ