ವಾಟ್ಸಪ್ ವಿಡಿಯೋದಲ್ಲಿ ತಲಾಖ್ ಕೊಟ್ಟ ಭೂಪ!

ಗುರುವಾರ, 20 ಏಪ್ರಿಲ್ 2017 (13:09 IST)
ಹೈದರಾಬಾದ್: ತ್ರಿವಳಿ ತಲಾಖ್ ನಿಷೇಧದ ಬಗ್ಗೆ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಮಹಿಳೆಯೊಬ್ಬರು ತನ್ನ ಪತಿ ವಾಟ್ಸಾಪ್ ವಿಡಿಯೋ ಮೂಲಕ ತಲಾಖ್ ಕೊಟ್ಟಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

 
ವಿಡಿಯೋ ಮೆಸೇಜ್ ಮಾಡಿ ಗಂಡ, ನನಗಿಂತ ಒಳ್ಳೆಯ ಪತಿ ನಿನಗೆ ಸಿಗುತ್ತಾನೆಂದು ಹೇಳಿ ತಲಾಖ್ ಕೊಟ್ಟಿದ್ದಾನೆಂದು ಮಹಿಳೆ ದೂರಿದ್ದಾರೆ. ಬಾದರ್ ಇಬ್ರಾಹಿಂ ಎಂದ ಎಂಬಿಎ ಪದವೀಧರೆ ವಿದೇಶದಲ್ಲಿ ಕೆಲಸ ಮಾಡುತ್ತಿರುವ ತನ್ನ ಇಂಜಿನಿಯರಿಂಗ್ ಉದ್ಯೋಗಿ ಪತಿ ಮುದಾಸಿರ್ ಅಹಮ್ಮದ್ ನಿಂದ ಇಂತಹದ್ದೊಂದು ಮೆಸೇಜ್ ಸ್ವೀಕರಿಸಿದ್ದಾಳೆ.

ಕಳೆದ ವರ್ಷವಷ್ಟೇ ಇವರ ವಿವಾಹವಾಗಿದ್ದು, 20 ತಿಂಗಳ ಸಹಜೀವನ ನಡೆಸಿ ಮುದಾಸಿರ್ ಸೌದಿ ದೇಶಕ್ಕೆ ಮರಳಿದ್ದ. ಇದೀಗ ದಿಡೀರ್ ಆಗಿ ತಲಾಖ್ ನೋಟೀಸ್ ನೀಡಲಾಗಿದ್ದು, ಬಾದರ್ ನನ್ನು ಅತ್ತೆ ಮನೆಯವರೂ ಸೇರಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ