ತಿರುವನಂತಪುರಂ(ಆ.03): ಸತತ 6 ದಿನಗಳಿಂದ 20 ಸಾವಿರಕ್ಕಿಂತ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದ ಕೇರಳದಲ್ಲಿ ಸೋಮವಾರ ಹೊಸ ಕೇಸಿನ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
ಸೋಮವಾರ ರಾಜ್ಯದಲ್ಲಿ 13984 ಕೇಸು ದಾಖಲಾಗಿದ್ದು, 118 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 34.25 ಲಕ್ಷಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1.65 ಲಕ್ಷದಷ್ಟಿದೆ. ಇನ್ನೊಂದೆಡೆ 6 ದಿನಗಳ ಬಳಿಕ ಪಾಸಿಟಿವಿಟಿ ದರ ಶೇ.11ಕ್ಕಿಂತ ಕಡಿಮೆ ದಾಖಲಾಗಿದೆ.
ದ.ಕ., ಉಡುಪಿ ಹಳ್ಳಿಗಳಲ್ಲಿ ಕೋವಿಡ್ ಸೋಂಕು ಉಲ್ಬಣ!
ಕೇರಳದ ಕೋವಿಡ್ ಸೋಂಕಿನ ಮಾರಕ ಪ್ರಭಾವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕಾಣತೊಡಗಿದೆ. ರಾಜ್ಯದಲ್ಲಿ ಪ್ರಸ್ತುತ ಅತಿ ಹೆಚ್ಚು ಸೋಂಕು ಇರುವ 20 ಹಳ್ಳಿಗಳ ಪೈಕಿ 11 ಗ್ರಾಮಗಳು ಅವಿಭಜಿತ ದಕ್ಷಿಣ ಕನ್ನಡಕ್ಕೆ ಸೇರಿವೆ. ಅದೇ ರೀತಿ ಪಟ್ಟಣಗಳನ್ನು ಗಮನಿಸಿದರೆ ರಾಜ್ಯಾದ್ಯಂತ ಕೆಲ ಪಟ್ಟಣಗಳು ಕೋವಿಡ್ ಹಾಟ್ಸ್ಪಾಟ್ಗಳಾಗಿವೆ.
ಕಳೆದ ಏಳು ದಿನದಲ್ಲಿ ಹೊಸ ಪ್ರಕರಣಗಳು ಅತಿ ಹೆಚ್ಚು ಏರಿಕೆ ಆಗಿರುವ ಹಳ್ಳಿಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 6 ಮತ್ತು ಉಡುಪಿ ಜಿಲ್ಲೆಯ 5 ಗ್ರಾಮಗಳಿವೆ. ಕೊಡಗಿನ ಎರಡು, ಹಾಸನ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ನಗರ, ಚಿಕ್ಕಮಗಳೂರು ಜಿಲ್ಲೆಯ ತಲಾ ಒಂದು ಗ್ರಾಮದಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗಾರು, ಮಲವೂರು ಮತ್ತು ಮುಂಡೂರ ಗ್ರಾಮಗಳು ಮೊದಲ ಮೂರು ಸ್ಥಾನದಲ್ಲಿವೆ. ನಂತರದ ಸ್ಥಾನದಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು ಮತ್ತು ಪೆರ್ಡೂರು ಹಾಗೂ ಉತ್ತರ ಕನ್ನಡದ ಹೊನ್ನಾವರ ಗ್ರಾಮಗಳಿವೆ