ಮದರ್ ತೇರೆಸಾ ಜನ್ಮದಿನ: ದಿ ಪವರ್ ಆಫ್ ಲವ್ ಆಂಡ್ ಪೀಸ್ ಕಾರ್ಯಕ್ರಮ

ಶುಕ್ರವಾರ, 23 ಆಗಸ್ಟ್ 2019 (16:10 IST)
ಬೆಂಗಳೂರು: ಸೇಂಟ್ ಮದರ್ ತೇರೆಸಾ ವರ್ಚುಲ್ ಯುನಿವರ್ಸಿಟಿ ಫಾರ್ ಪೀಸ್ ಆಂಡ್ ಎಜ್ಯುಕೇಶನ್ ವತಿಯಿಂದ ಮದರ್ ತೇರೆಸಾ ಅವರ 109ನೇ ಜನ್ಮದಿನದ ಅಂಗವಾಗಿ ಹೋಟೆಲ್ ಕ್ಯಾಪಿಟಲ್‌ನಲ್ಲಿ "ದಿ ಪವರ್ ಆಫ್ ಲವ್ ಆಂಡ್ ಪೀಸ್" ಕಾರ್ಯಕ್ರಮ ಆಯೋಜಿಸಲಾಗಿದೆ.
"ದಿ ಪವರ್ ಆಫ್ ಲವ್ ಆಂಡ್ ಪೀಸ್" ಅತ್ಯುತ್ತಮ ಸಂಶೋಧನಾ ಪ್ರಮಾಣ ಪತ್ರವನ್ನು ಅಂದೇ ಘೋಷಿಸಲಾಗುವುದು. ಸಂಶೋಧಕರಿಗೆ ಗೌರವ ಸನ್ಮಾನ ನೀಡಲಾಗುತ್ತದೆ.
 
ರವಿವಾರ ದಿನಾಂಕ 25 ರಂದು ವಿಧಾನಸೌಧಕ್ಕೆ ಹತ್ತಿರವಿರುವ ಹೋಟೆಲ್ ಕ್ಯಾಪಿಟಲ್‌ನ ವೈಟ್‌ಹೌಸ್‌ ಹಾಲ್‌ನಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
 
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಯಸುವವರು 2100 ರೂಪಾಯಿ(ಇದರಲ್ಲಿ ಪ್ರಮಾಣ ಪತ್ರ, ಬೆಳಿಗ್ಗೆ ಮತ್ತು ಸಂಜೆ ಕಾಫಿ, ಲಂಚ್, ಸ್ನ್ಯಾಕ್ಸ್‌ಗಳು ನೀಡಲಾಗುತ್ತದೆ) ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿ ಅಥವಾ ವಿವರಗಳಿಗಾಗಿ ಸಂಪರ್ಕಿಸ ಬಯಸುವವರು ಈ ಮೊಬೈಲ್ ಸಂಖ್ಯೆಗೆ 9845847815 ಕರೆ ಮಾಡಬಹುದಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ