ಪದ್ಮಾವತಿ ಸಿನಿಮಾ ಬಿಡುಗಡೆ ವಿರೋಧಿಸಿ ತಲವಾರ ಹಿಡಿದು ಪ್ರತಿಭಟನೆ- 8ಜನ ಬಂಧನ
ಗುರುವಾರ, 23 ನವೆಂಬರ್ 2017 (19:46 IST)
ಕಲಬರ್ಗಿ: ಪದ್ಮಾವತಿ ಸಿನಿಮಾ ಬಿಡುಗಡೆ ವಿರೋಧಿಸಿ ರಜಪೂತ ಸಮಾಜದವರು ನಡೆಸಿದ ಪ್ರತಿಭಟನೆಯಲ್ಲಿ ತಲವಾರ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ನಂದಕಿಶೋರ ಚವಾಣ, ಕರಣಸಿಂಗ ಗೆಹವಾರ, ಕಾರ್ತಿಕಸಿಂಗ, ನರೇಶ ದುಬೆ, ಕರಣಸಿಂಗ ಹಜಾರೆ, ಗೌರವ ಠಾಕೂರ, ಆಕಾಶ ಸಿಂಗ ಹಾಗೂ ಆಕಾಶ ಠಾಕೂರ ಅವರನ್ನು ಬಂಧಿಸಲಾಗಿದೆ.
ಅನುಮತಿ ಪಡೆದುಕೊಳ್ಳದೆ ಪ್ರತಿಭಟನೆ ನಡೆಸಲಾಗಿದ್ದು, ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಜನರಿಗೆ ಭಯ ಹುಟ್ಟಿಸಿದ್ದಾರೆ. ಆದ್ದರಿಂದ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆಪಾದನೆ ಮೇರೆಗೆ ಇಬ್ಬರು ಎಎಸ್.ಐಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.