ಬೆಂಗಳೂರು: ಅಕ್ಕಿಯ ದುರುಪಯೋಗವನ್ನು ತಡೆಯಲು ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಬದಲಿಗೆ ಇಂದಿರಾ ಆಹಾರ ಕಿಟ್ಟ ವಿತರಿಸಲಿ ನಿರ್ಧರಿಸಿದೆ.
ಈ ಕಿಟ್‌ನಲ್ಲಿ ತೊಗರಿ, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಸೇರಿದಂತೆ ಇತರ ಅಗತ್ಯ ವಸ್ತುಗಳಿರಲಿದೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಪಾಟೀಲ್ ಅವರು, ಈ ಕಿಟ್ ನೀಡಿಕೆಯಿಂದಾಗಿ ಸರ್ಕಾರದ ಮೇಲೆ ಸ್ವಲ್ಪಮಟ್ಟಿಗೆ ಆರ್ಥಿಕ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಕಿಟ್ ವಿತರಣೆಗಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಯಾವ ತಿಂಗಳಿನಿಂದ ಈ ಯೋಜನೆ ಜಾರಿಗೆ ಬರಲಿದೆ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಂದಿರಾ ಆಹಾರ ಕಿಟ್‌ನಲ್ಲಿ ಏನಿರುತ್ತದೆ:
ತೊಗರಿ ಬೇಳೆ - 1 ಕೆಜಿ
ಹೆಸರು ಕಾಳು - 1 ಕೆಜಿ
ಅಡುಗೆ ಎಣ್ಣೆ - 1 ಕೆಜಿ
ಸಕ್ಕರೆ - 1 ಕೆಜಿ
ಉಪ್ಪು - ಕೆಜಿ