ಗುರ್ಗಾಂವ್:ಮೇ-22: ತಂಪು ಪಾನೀಯವಾದ ಮಿರಿಂಡಾ ಬಾಟಲಿಯಲ್ಲಿ ಸತ್ತ ಕೀಟ ಪತ್ತೆಯಾದ ಹಿನ್ನಲೆಯಲ್ಲಿ ಹರ್ಯಾಣದ ಗುರ್ಗಾಂವ್ ನಲ್ಲಿ ಪೆಪ್ಸಿಕೊ ಇಂಡಿಯಾ ಕಂಪೆನಿಗೆ ಚೆನ್ನೈ ಗ್ರಾಹಕ ವ್ಯಾಜ್ಯ ಪುನರ್ನಿರ್ಮಾಣ ವೇದಿಕೆ 15,000 ರೂಪಾಯಿ ದಂಡ ವಿಧಿಸಿದೆ.
ವಿಚಾರಣೆ ನಡೆಸಿದ ಗ್ರಾಹಕರ ಕೋರ್ಟ್, ಸತ್ತ ಕೀಟ ಪಾನೀಯದಲ್ಲಿದ್ದರಿಂದ ಅದನ್ನು ಖರೀದಿಸಿದ ಗ್ರಾಹಕನಿಗೆ ಮಾನಸಿಕ ಹಿಂಸೆಯಾಗುವುದಲ್ಲದೆ ಆರೋಗ್ಯದ ಮೇಲೆ ಕೂಡ ಪರಿಣಾಮ ಬೀರಬಹುದು ಎಂದು ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದೆ. ಗ್ರಾಹಕ ಅನುಭವಿಸಿದ ಮಾನಸಿಕ ಹಿಂಸೆಗೆ 10,000 ರೂಪಾಯಿ ಮತ್ತು ಕೋರ್ಟ್ ನಲ್ಲಿ ವ್ಯಾಜ್ಯದ ಖರ್ಚಿಗಾಗಿ 5,000 ರೂಪಾಯಿಗಳನ್ನು 6 ವಾರಗಳೊಳಗೆ ನೀಡಬೇಕೆಂದು ಆದೇಶ ಹೊರಡಿಸಿದೆ.