Video: ಆಪರೇಷನ್ ಸಿಂಧೂರ್ ಶೌರ್ಯದ ಬಗ್ಗೆ ಹೇಳಿದ್ರೆ ವಿಪಕ್ಷಗಳು ಮೇಜು ತಟ್ಟಲ್ಲ ಯಾಕೆ: ಅನುರಾಗ್ ಠಾಕೂರ್
ಪಹಲ್ಗಾಮ್ ನಲ್ಲಿ ದಾಳಿ ಮಾಡಿದ ಉಗ್ರರು ಅಮಾಯಕರ ಪ್ಯಾಂಟ್ ಬಿಚ್ಚಿಸಿ ಧರ್ಮ ಕೇಳಿದ್ರು, ಕಲ್ಮಾ ಹೇಳು ಎಂದು ಬೆದರಿಸಿದ್ರು. ಬಳಿಕ ಧರ್ಮ ಯಾವುದು ಎಂದು ತಿಳಿದುಕೊಂಡು ಗುಂಡು ಹೊಡೆದರು. ಧರ್ಮದ ಆಧಾರದಲ್ಲಿಯೇ ಈ ದಾಳಿ ನಡೆದಿತ್ತು ಎನ್ನುವುದು ಸ್ಪಷ್ಟ.
ಹಾಗಿದ್ದರೂ ವಿಪಕ್ಷ ಸದಸ್ಯರು ಇದನ್ನು ಎಲ್ಲಿಯೂ ಹೇಳುವುದಿಲ್ಲ. ಧರ್ಮ ಕೇಳಿ ಹೊಡೆದರು ಎಂದು ಹೇಳಲ್ಲ ಯಾಕೆ? ಇಲ್ಲಿಯವರೆಗೆ ಸಂಸತ್ತಿನಲ್ಲಿ ಸಾಕಷ್ಟು ವಿಪಕ್ಷ ಸದಸ್ಯರು ಈ ದಾಳಿ ಬಗ್ಗೆ ಮಾತನಾಡಿದರು. ಆದರೆ ಒಬ್ಬರೂ ಇದನ್ನು ಹೇಳಲಿಲ್ಲ. ಇಷ್ಟು ಹೇಳಲು ವಿಪಕ್ಷ ಸದಸ್ಯರಿಗೆ ಏನು ಸಮಸ್ಯೆಯಾಗಿತ್ತು?
ರಕ್ಷಣಾ ಸಚಿವರು ನಮ್ಮ ಸೇನೆಯ ಶೌರ್ಯದ ಬಗ್ಗೆ ಪಟ್ಟಿ ಮಾಡಿ ಹೇಳುತ್ತಿದ್ದರು. ಆದರೆ ವಿಪಕ್ಷ ಸದಸ್ಯರು ಮೇಜು ತಟ್ಟಲಿಲ್ಲ. ಈ ಭಯೋತ್ಪಾದಕರು ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಹುನ್ನಾರದಿಂದಲೇ ದಾಳಿ ನಡೆಸಿದ್ದರು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದಕ್ಕೆ ತಕ್ಕ ತಿರುಗೇಟು ಕೊಟ್ಟಿತು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.