ಶಾಕಿಂಗ್! ಜೂನ್ 30 ರಿಂದ ವ್ಯಾಟ್ಸಾಪ್ ಬಳಕೆ ಸ್ಥಗಿತ?!

ಶನಿವಾರ, 4 ಮಾರ್ಚ್ 2017 (11:14 IST)
ನವದೆಹಲಿ: ವ್ಯಾಟ್ಸಾಪ್ ಎನ್ನುವುದು ಇತ್ತೀಚೆಗೆ ಎಲ್ಲರ ಜೀವನದ ಅವಿಭಾಜ್ಯ ಅಂಗದಂತಾಗಿದೆ. ಆದರೆ ಅದರ ಬಳಕೆದಾರರಿಗೆ ಒಂದು ಶಾಕಿಂಗ್ ನ್ಯೂಸ್ ಕಾದಿದೆ. ಜೂನ್ 30 ರಿಂದ ವ್ಯಾಟ್ಸಾಪ್ ಬಂದ್ ಆಗಲಿದೆ!


ಬೇರೆ ಬೇರೆ ಚಾಟಿಂಗ್ ಸೈಟ್ ಗಳಿಂದ ಸಾಕಷ್ಟು ಸ್ಪರ್ಧೆ ಎದುರಾಗುತ್ತಿರುವುದರಿಂದ ತನ್ನ ಫೀಚರ್ ಗಳನ್ನೂ ಇನ್ನೂ ಮೇಲ್ ಸ್ತರಕ್ಕೆ ಏರಿಸುವುದಕ್ಕೆ ಫೇಸ್ ಬುಕ್ ಒಡೆತನದ ವ್ಯಾಟ್ಸಾಪ್ ಇಂತಹ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಈಗಾಗಲೇ ಅಂಡ್ರಾಯ್ಡ್ 2.1, 2.2 ಮಾದರಿಯ ಫೋನ್ ಗಳಲ್ಲಿ ವ್ಯಾಟ್ಸಾಪ್ ಬಂದ್ ಆಗಿದೆ.

ಇನ್ನು ವಿಂಡೋಸ್ 7, ಬ್ಲ್ಯಾಕ್ ಬೆರಿ ಒಎಸ್, ಬ್ಲ್ಯಾಕ್ ಬೆರಿ 10, ನೋಕಿಯಾ ಎಸ್40, ಮತ್ತು ನೋಕಿಯಾ ಸಿಂಬಿಯಾನ್ ಎಸ್60 ಮಾದರಿಯ ಫೋನ್ ಗಳಲ್ಲೂ ವ್ಯಾಟ್ಸಾಫ್ ಸೇವೆ ಬಂದ್ ಆಗಲಿವೆ ಎಂದು ಅಧಿಕೃತ ಬ್ಲಾಗ್ ನಲ್ಲಿ ಬರೆಯಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ