ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

Sampriya

ಬುಧವಾರ, 18 ಜೂನ್ 2025 (20:37 IST)
Photo Credit X
ಟೆಹರಾನ್: ಇಸ್ರೇಲ್ ಹಾಗೂ ಇರಾನ್ ನಡುವಿಣ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಇರಾನ್‌ ಬೇಷರತ್ತಾಗಿ ಶರಣಾಗುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದರು. 

ಇದೀಗ ಟ್ರಂಪ್‌ ಎಚ್ಚರಿಕೆಗೆ ಡೊಂಟ್ ಕೇರ್ ಮಾಡದೆ  ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕೌಂಟರ್ ಕೊಟ್ಟಿದ್ದಾರೆ. 

ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಮೇನಿ, ಇರಾನ್ ಶರಣಾಗುವ ರಾಷ್ಟ್ರವಲ್ಲ. ಅಲ್ಲದೇ ಯಾವುದೇ ಮಿಲಿಟರಿ ಹಸ್ತಕ್ಷೇಪವು ನಿಸ್ಸಂದೇಹವಾಗಿ ಸರಿಪಡಿಸಲಾಗದ ಹಾನಿಗೆ ಕಾರಣವಾಗುತ್ತದೆ ಎಂಬುದನ್ನು ಅಮೆರಿಕನ್ನರು ತಿಳಿದಿರಬೇಕು ಎಂದರು.

"ನಾವು ಭಯೋತ್ಪಾದಕ ಝಿಯೋನಿಸ್ಟ್ ಆಡಳಿತಕ್ಕೆ ಬಲವಾದ ಪ್ರತಿಕ್ರಿಯೆಯನ್ನು ನೀಡಬೇಕು. ನಾವು ಝಿಯೋನಿಸ್ಟ್ಗಳಿಗೆ ಯಾವುದೇ ಕರುಣೆ ತೋರಿಸುವುದಿಲ್ಲ." ಇರಾನ್ ಬುಧವಾರ ಮುಂಜಾನೆ ಇಸ್ರೇಲ್‌ನಲ್ಲಿ ಎರಡು ಸುತ್ತಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿದ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.

ಇರಾನ್ ವಾಯು ಯುದ್ಧವು ಆರನೇ ದಿನಕ್ಕೆ ಕಾಲಿಟ್ಟಿದೆ, ಇರಾನ್‌ನ 'ಬೇಷರತ್ತಾದ ಶರಣಾಗತಿ'ಗೆ ಟ್ರಂಪ್ ಕರೆ ನೀಡಿದ್ದಾರೆ, ಖಮೇನಿ ಅವರ ಪೋಸ್ಟ್‌ಗಳು ವಿಶಾಲ ಸೈದ್ಧಾಂತಿಕ ಹೋರಾಟದ ಭಾಗವಾಗಿ ದಾಳಿಗಳನ್ನು ರೂಪಿಸುವಂತೆ ಕಂಡುಬಂದಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ