ಮಹಿಳೆಯರ ರಕ್ಷಣೆಗಾಗಿ ಸುರಕ್ಷಾ ಆಪ್ ಬಿಡುಗಡೆ

ಗುರುವಾರ, 25 ಮೇ 2017 (17:49 IST)
ಬೆಂಗಳೂರು:ಮೇ-25: ಮಹಿಳೆಯರು, ಮಕ್ಕಳು ರಕ್ಷಣೆಗಾಗಿ ಸುರಕ್ಷಾ ಆಪ್ ಎಂಬ ಹೆಸರಿನ ವಿಶೇಷ ಆಪ್ ಒಂದನ್ನು ನಟ ರಕ್ಷಿತ್ ಶೆಟ್ಟಿ ಬಿಡುಗಡೆಮಾಡಿದ್ದಾರೆ. ಅಪಾಯದ ಪರಿಸ್ಥಿತಿಯಲ್ಲಿರುವವರು, ತೊಂದರೆಯಲ್ಲಿ ಸಿಲುಕಿದವರು ಹಾಗೂ ಮುಖ್ಯವಾಗಿ ಮಹಿಳೆಯರು, ಮಕ್ಕಳು, ವೃದ್ಧರಿಗಾಗಿ ಬೆಂಗಳೂರು ನಗರ ಪೊಲೀಸರು ಈ ವಿಶೇಷವಾದ ಆಪ್ ನ್ನು ಹೊರತಂದಿದ್ದಾರೆ.
 
ಈ ಆಪ್ ನಲ್ಲಿ ಟ್ರಿಗರ್ ಬಟನ್ 5 ಸಲ ಪ್ರೆಸ್ ಮಾಡಿದರೆ 10 ಸೆಕೆಂಡ್ ಗಳ ವಿಡಿಯೋ ಕ್ಲಿಪ್ಪಿಂಗ್ ರೆಕಾರ್ಡ್ ಆಗಿ ಅಪ್ ಲೋಡ್ ಆಗುತ್ತದೆ. ನೀವಿರುವ ಸ್ಥಳ, ವಿಡಿಯೋ ಪೊಲೀಸರಿಗೆ ರವಾನೆಯಾಗುತ್ತದೆ. ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೂ ವಿಡಿಯೋ ತಲುಪುತ್ತದೆ.
 
ಅಪಾಯಕ್ಕೆ ಸಿಲುಕಿದವರ ಸ್ಥಳ ಜಿಪಿಎಸ್ ಮೂಲಕ ಪೊಲೀಸರಿಗೆ ಗೊತ್ತಾಗುತ್ತದೆ. ಆಂಡ್ರಾಯ್ಡ್ ಮತ್ತು ಅಒಓಎಸ್ ಎರಡೂ ಆಪರೇಟಿಂಗ್ ಸಿಸ್ಟಂಗಳಲ್ಲೂ ಈ ಸುರಕ್ಷಾ ಆಪ್ ಲಭ್ಯ.
 

ವೆಬ್ದುನಿಯಾವನ್ನು ಓದಿ