ಅಧ್ಯಯನ ಕೋಣೆ ಹೇಗಿರಬೇಕು: ಇಲ್ಲಿದೆ ವಾಸ್ತು ಟಿಪ್ಸ್

ಸೋಮವಾರ, 21 ಸೆಪ್ಟಂಬರ್ 2015 (14:05 IST)
ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗದ ವಾಸ್ತು ಪ್ರದೇಶ ಜ್ಞಾನಕ್ಕೆ ಪ್ರೇರಣೆ ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ದಿಕ್ಕು ವಿದ್ಯಾಭ್ಯಾಸಕ್ಕೆ ಸೂಕ್ತವಾಗಿರುತ್ತದೆ, ವಿದ್ಯೆ ಎಂದರೆ ಜ್ಞಾನ, ಅಭ್ಯಾಸ ಎಂದರೆ ತರಬೇತಿ. ಆದ್ದರಿಂದ, ತರಬೇತಿ ಪಡೆಯುವಾಗ ನೀವು ಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕಠಿಣ ಪರಿಶ್ರಮದಿಂದ ಅಭ್ಯಸಿಸಿದಲ್ಲಿ ಹೆಚ್ಚಿನ ಜ್ಞಾನ ಪಡೆಯಲು ಸಾಧ್ಯವಾಗುತ್ತದೆ.

ಆದ್ದರಿಂದ ಅಧ್ಯಯನ ಕೋಣೆಯ ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗ ವಿದ್ಯಾಭ್ಯಾಸಕ್ಕೆ ಸೂಕ್ತವಾಗಿರುತ್ತದೆ. ಜ್ಞಾನಕ್ಕೆ ಸಂಬಂಧಿಸಿದಂತೆ ಬೇಕಾಗುವ ನೆನಪಿನ ಶಕ್ತಿ, ಸಾಮರ್ಥ್ಯ ಮತ್ತು ಜ್ಞಾನವನ್ನು ಗ್ರಹಿಸುವ ಶಕ್ತಿಗೆ ವಾಸ್ತು ಹೆಚ್ಚಿನ ಬೆಂಬಲ ಸೂಚಿಸುತ್ತದೆ.   
 
ಇಂತಹ ಪ್ರದೇಶದಲ್ಲಿ ವಾಶಿಂಗ್‌ಮಶಿನ್ ಯಾವತ್ತು ಇಡಬಾರದು.ಒಂದು ವೇಳೆ, ನೀವು ಈ ಪ್ರದೇಶದಲ್ಲಿ ವಾಶಿಂಗ್ ಮಶಿನ್ ಇಟ್ಟಲ್ಲಿ ನಿಮ್ಮ ಮಕ್ಕಳು ಎಷ್ಟೇ ಪರಿಶ್ರಮ ಪಟ್ಟು ಅಭ್ಯಾಸ ಮಾಡಿದರೂ ಪರೀಕ್ಷೆ ಹಾಲ್‌ನಲ್ಲಿ ಮರೆತುಹೋಗುವ ಸಾಧ್ಯತೆಗಳಿರುತ್ತವೆ.
 
ಮಕ್ಕಳು ವಿದ್ಯಾವಂತರು, ಪ್ರತಿಭಾವಂತರಾಗಬೇಕು ಎನ್ನುವುದು ಎಲ್ಲಾ ತಂದೆ ತಾಯಿಗಳ ಬಯಕೆಯಾಗಿರುತ್ತದೆ. ಆದ್ದರಿಂದ ಮಕ್ಕಳು ವಿದ್ಯಾಭ್ಯಾಸ ಮಾಡುವ ಕೋಣೆಯ ಪಶ್ಚಿಮ-ದಕ್ಷಿಣ-ಪಶ್ಚಿಮ ಭಾಗದಲ್ಲಿ ಪುಸ್ತಕಗಳ ಚಿತ್ರಗಳು ಅಥವಾ ಲೈಬ್ರೆರಿ ಮಾಡುವುದು ಉತ್ತಮ.
 
ಯಾವ ವಿಷಯಗಳ ಬಗ್ಗೆ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ವಾಸ್ತು ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸಾಧನೆ ಮಾಡಬೇಕು ಎಂದು ಬಯಸಿದಲ್ಲಿ ವಿದ್ಯಾರ್ಥಿಗಳು ಪಶ್ಚಿಮದತ್ತ ಮುಖ ಮಾಡಿ ಅಭ್ಯಾಸ ಮಾಡಬೇಕು.  
 
ಒಂದು ವೇಳೆ, ವಿದ್ಯಾರ್ಥಿಗಳು ಕೋಣೆಯ ದಕ್ಷಿಣ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಭಾಷಣ ಮಾಡುವ ಸಾಮರ್ಥ್ಯ, ಉದ್ಯಮಿಯಾಗುವ ಮುನ್ಸೂಚನೆಗಳು ಕಂಡು ಬರುತ್ತವೆ. 
 
ಒಂದು ವೇಳೆ, ವಿದ್ಯಾರ್ಥಿಗಳು ಪೂರ್ವದತ್ತ ಮುಖ ಮಾಡಿ ಅಭ್ಯಾಸ ಮಾಡುತ್ತಿದ್ದರೆ ಅವರು ಧಾರ್ಮಿಕ ಕಾರ್ಯಗಳಲ್ಲಿ ಜ್ಞಾನ ಪಡೆಯುತ್ತಾರೆ. 
 
ಒಂದು ವೇಳೆ, ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ತೋರದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಪಶ್ಚಿಮ ಭಾಗದತ್ತ ಮುಖ ಮಾಡಿ ಅಭ್ಯಾಸ ಮಾಡುವಂತೆ ಸಲಹೆ ನೀಡಬೇಕು. 

ವೆಬ್ದುನಿಯಾವನ್ನು ಓದಿ