ಇಂದಿರಾ ಗಾಂಧಿ ಆಪರೇಷನ್ ಬ್ಲೂ ಸ್ಟಾರ್ ಮಾಡಿದ್ದು ತಪ್ಪು ಎಂದ ಚಿದಂಬರಂ: ಕಾಂಗ್ರೆಸ್ ಕೆಂಡಾಮಂಡಲ

Krishnaveni K

ಸೋಮವಾರ, 13 ಅಕ್ಟೋಬರ್ 2025 (10:05 IST)
Photo Credit: Instagram
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಗೃಹಸಚಿವ ಪಿ ಚಿದಂಬರಂ ಸಂದರ್ಶನವೊಂದರಲ್ಲಿ ಈ ಹಿಂದೆ ಇಂದಿರಾ ಗಾಂಧಿಯವರು ಆಪರೇಷನ್ ಬ್ಲೂ ಸ್ಟಾರ್ ಹೆಸರಿನಲ್ಲಿ ಸ್ವರ್ಣಮಂದಿರದೊಳಗೆ ಸೇನೆ ನುಗ್ಗಿಸಿದ್ದ ಘಟನೆ ಬಗ್ಗೆ ಸಂದರ್ಶನವೊಂದರಲ್ಲಿ ತಪ್ಪು ಎಂದಿದ್ದು ಈಗ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ.
 

ಖುಷ್ವಂತ್ ಸಿಂಗ್ ಸಾಹಿತ್ಯ ಉತ್ಸವದಲ್ಲಿ ಹರೀಂದರ್ ಬವೇಜಾ ಅವರ ‘ದೇ  ವಿಲ್ ಶೂಟ್ ಯು’ ಪುಸ್ತಕದ ಕುರಿತು ಸಂವಾದದಲ್ಲಿ ಪಿ ಚಿದಂಬರಂ ಇಂತಹದ್ದೊಂದು ಹೇಳಿಕೆ ನೀಡಿದ್ದರು.

1984 ರಲ್ಲಿ ಅಮೃತಸರದ ಸ್ವರ್ಣಮಂದಿರದೊಳಗೆ ಅಡಗಿ ಕೂತಿದ್ದ ಪ್ರತ್ಯೇಕತಾವಾದಿಗಳನ್ನು ಹತ್ಯೆ ಮಾಡಲು ಭಾರತೀಯ ಸೇನೆಯನ್ನು ಬಳಸಿ ಆಪರೇಷನ್ ಬ್ಲೂ ಸ್ಟಾರ್ ಹೆಸರಿನಲ್ಲಿ ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ಸೇನೆಯನ್ನು ಸ್ವರ್ಣ ಮಂದಿರದೊಳಗೆ ನುಗ್ಗಿಸಿ ಉಗ್ರರನ್ನು ಹತ್ಯೆಗೈದಿದ್ದರಿಂದ ಮಂದಿರದ ಅಖಾಲ್ ತಖ್ತ್ ಗೆ ಹಾನಿಯಾಗಿತ್ತು ಎಂದು ಸಿಖ್ ಸಮುದಾಯ ಆಕ್ರೋಶಗೊಂಡಿತ್ತು. ಇದರ ಪರಿಣಾಮ ದೇಶದಲ್ಲಿ ಸಿಖ್ ಸಮುದಾಯ ಭಾರೀ ಪ್ರತಿಭಟನೆಗಿಳಿದಿತ್ತು. ಕೊನೆಗೆ ಇಂದಿರಾ ಗಾಂಧಿಯವರು ಸಿಖ್ ಸಮುದಾಯಕ್ಕೆ ಸೇರಿದ ಅಂಗರಕ್ಷಕರಿಂದಲೇ ಗುಂಡಿಕ್ಕಿ ಹತ್ಯೆಗೀಡಾಗಿದ್ದರು.

ಈ ಘಟನೆ ಬಗ್ಗೆ ಪಿ  ಚಿದಂಬರಂ ಈಗ ಸಂವಾದದಲ್ಲಿ ಮಾತನಾಡಿದ್ದಾರೆ. ಅಂದು ಇಂದಿರಾ ಗಾಂದಿ ತಪ್ಪು ಮಾಡಿದರು. ಅವರು ಅಂದು ಸೇನೆ ಕಳುಹಿಸುವ ಬದಲು ಅನ್ಯ ಮಾರ್ಗಗಳ ಬಗ್ಗೆ ಯೋಚನೆ ಮಾಡಬಹುದಿತ್ತು ಎಂದಿದ್ದಾರೆ.

ಆದರೆ ಇದು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ಅಣತಿ ಮೇರೆ ಚಿದಂಬರಂ ಇಂತಹ ಹೇಳಿಕೆ ನೀಡಿರಬೇಕು. ಇದೆಲ್ಲಾ ತಮ್ಮ ಮೆಲಿನ ಕೇಸ್ ಗಳ ಹೊರೆಯನ್ನು ತಗ್ಗಿಸುವ ಪ್ರಯತ್ನವಾಗಿರಬಹುದು ಎಂದು ಕಾಂಗ್ರೆಸ್ ನಾಯಕ ರಶೀದ್ ಅಳ್ವಿ ವಾಗ್ದಾಳಿ ನಡೆಸಿದ್ದಾರೆ.

ಮೊನ್ನೆಯಷ್ಟೇ ಪಿ ಚಿದಂಬರಂ ಮುಂಬೈ ಉಗ್ರ ದಾಳಿಯ ಬಳಿಕ ನಾವು ಪಾಕಿಸ್ತಾನದ ಜೊತೆ ಯುದ್ಧ ಮಾಡಲು ಮುಂದಾದಾಗ ಅಮೆರಿಕಾ ತಡೆಯಿತು ಎನ್ನುವ ಮೂಲಕ ಬಿಜೆಪಿಗೆ ಕಾಂಗ್ರೆಸ್ ವಿರುದ್ಧ ಟೀಕೆ ಮಾಡಲು ಅಸ್ತ್ರವಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ