ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಮತ್ತೆ ಸಮ್ಮಶ್ರ ಫಲಿತಾಂಶ ಮೂಡಿಬಂದರೆ ಜೆಡಿಎಸ್‌ನೊಂದಿಗೆ ಮೈತ್ರಿಮಾಡಿಕೊಳ್ಳಲು ತಾನು ಸಿದ್ಧ ಎಂಬ ಸುಳಿವನ್ನು ಕಾಂಗ್ರೆಸ್ ಇಂದು ನೀಡಿದೆ.
"ಜೆಡಿಎಸ್‌ಗೆ ಬಿಜೆಪಿಯೊಂದಿಗಿನ ಮೈತ್ರಿಯ ದುಸ್ವಪ್ನವಿದೆ, ಆದರೆ ಕಾಂಗ್ರೆಸ್‌ನೊಂದಿಗೆ ಅಂತಹ ಯಾವುದೇ ಕೆಟ್ಟ ಅನುಭವಗಳಿಲ್ಲ, ಇದಲ್ಲದೆ ನಾವು ಅವರೊಂದಿಗೆ 20 ತಿಂಗಳಕಾಲ ಸಂತೋಷದಿಂದ ಕಾರ್ಯನಿರ್ವಹಿಸಿದ್ದೇವೆ" ಎಂದು ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ವೀರಪ್ಪ ಮೊಯ್ಲಿ ಹೇಳಿದ್ದಾರೆ.
224 ಸದಸ್ಯತ್ವ ಬಲದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲರಾದರೆ ದೇವೇಗೌಡರ ಜೆಡಿಎಸ್‍ನೊಂದಿಗೆ ಮತ್ತೆ ಕೈಜೋಡಿಸುವಿರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಈ ಸುಳಿವು ನೀಡಿದ್ದಾರೆ.
ಕಾಂಗ್ರೆಸ್‌ಗೆ ಮೈತ್ರಿಯ ಸಂಸ್ಕೃತಿ ಇದೆ. ಪಕ್ಷವು ಯಾವತ್ತೂ ಸ್ಥಿರತೆಯ ಪರವಾಗಿ ನಿಂತಿದೆ. ಈ ಹಿಂದೆಯು ಸ್ಥಿರತೆಗಾಗಿ ಪಕ್ಷವು ತ್ಯಾಗಮಾಡಿದೆ. ಬಿಜೆಪಿಯಲ್ಲಿರುವ ಅಭದ್ರತೆ ನಮ್ಮಲ್ಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ನುಡಿದರು.
ಜಾತ್ಯತೀತೆಯು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಮಾನ ಅಂಶವಾಗಿದೆ ಎಂದು ಎಐಸಿಸಿ ವಕ್ತಾರೆ ಜಯಂತಿ ನಟರಾಜನ್ ಹೇಳಿದ್ದಾರೆ. ಅದೇನಿದ್ದರೂ ಪಕ್ಷದ ಹೈಕಮಾಂಡ್, ಮೈತ್ರಿಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ನುಡಿದರು.