ವೆಬ್ ದುನಿಯಾದಲ್ಲಿ ತಾಜಾತಾಜಾ ಫಲಿತಾಂಶ

ರಾಜಕಾರಣಿಗಳ ಬಿರು ಬಿಸಿಲಿನ ನಡುವಿನ ಸಾರ್ವಜನಿಕ ಸಭೆಗಳು, ಬೀದಿ ಸಮಾವೇಶಗಳ ಭಾಷಣ, ಧೂಳೆದ್ದ ರಸ್ತೆಗಳ ಓಡಾಟ, ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿ ಶತಾಯ ಗತಾಯ ಗೆಲುವಿಗೆ ಶ್ರಮಿಸುತ್ತಿರುವ ದೃಶ್ಯಗಳಿಗೆಲ್ಲ ತೆರೆ ಬಿದ್ದಿದೆ. ಇದೀಗ ಏನಿದ್ದರೂ ಎಲ್ಲರ ಗಮನ ಮತದಾರ ಮಹಾಪ್ರಭು, ಮಾಯಾಪೆಟ್ಟಿಗೆ ಚುನಾವಣೆ ಯಂತ್ರದೊಳಗೆ ಯಾರ ಹಣೆಬರಹವನ್ನು ಹೇಗೆ ಬರೆದಿದ್ದಾನೆಂಬುದರ ಮೇಲೆ ನೆಟ್ಟಿದೆ.

ಭಾನುವಾರದ ಮತಎಣಿಕಾ ಸಮಾಚಾರವನ್ನು ವೆಬ್ ದುನಿಯಾ ಕನ್ನಡ ಕ್ಷಣಕ್ಷಣ ತಾಜಾ ಸುದ್ದಿಗಳೊಂದಿಗೆ ಬಿತ್ತರಿಸಲಿದೆ.

224 ಕ್ಷೇತ್ರಗಳಲ್ಲಿ ಆರಿಸಿಬಂದಿರುವ ಶಾಸಕರು ಯಾರು? ಯಾರಿಗೆ ಬಹುಮತ? ಗೆದ್ದವರಾರು, ಬಿದ್ದವರಾರು ಎಂಬ ಸುದ್ದಿಗಳು ನಿಮಗಾಗಿ, ನಿಮ್ಮ ವೆಬ್ ದುನಿಯಾದಲ್ಲಿ. ಸಂಜೆ ಸುಮಾರು ನಾಲ್ಕು ಗಂಟೆ ವೇಳೆಗೆ ಸಂಪೂರ್ಣ ಚಿತ್ರ ಲಭಿಸಲಿದೆ.

ಮೇ 10, 16 ಮತ್ತು 22ರಂದು ಮೂರು ಹಂತಗಳಲ್ಲಿ ನಡೆದ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳ ಅಲೆ ಬಿಜೆಪಿ ಪರವಾಗಿದೆ. ಮತ್ತೊಂದು ಸಮೀಕ್ಷೆ ಕಾಂಗ್ರೆಸ್‌ನೊಳಗೆ ಕನಸು ಬಿತ್ತಿದೆ. ಇದರೊಂದಿಗೆ, ಯಾವುದಕ್ಕೂ ಜೆಡಿಎಸ್ ನಿರ್ಣಾಯಕ ಎಂಬ ತೀರ್ಪು ಬಂದರೂ ಬರಬಹುದೆಂಬ ಅಂಶಗಳೂ ವ್ಯಕ್ತವಾಗಿದೆ. ನಿಜವಾಗಿಯೂ ಫಲಿತಾಂಶ ಏನು? ಮತದಾರನ ಸರ್ವೋಚ್ಛ ಹಕ್ಕು ಅದೇನು ತೀರ್ಪು ನೀಡಿದೆ? ಬನ್ನಿ ವೆಬ್ ದುನಿಯಾ ಕನ್ನಡದಲ್ಲಿ ತಿಳಿಯಿರಿ.

ವೆಬ್ದುನಿಯಾವನ್ನು ಓದಿ