ಐವತ್ತು ವರ್ಷಗಳಿಂದ ಅವರನ್ನು ಯಾರೂ ಕಟ್ಟಿಹಾಕಿಲ್ಲ. ಆದರೆ ಈ ಬಾರಿ ನಾವು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದೇವೆ. ಹೀಗಂತ ಕಮಲ ಪಾಳೆಯದ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಹೇಳಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಶ್ವಮೇಧ ಕುದುರೆ ಇದ್ದಹಾಗೆ ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳಿದ್ದಾರೆ.
ಖರ್ಗೆ ಅವರನ್ನು ಯಾರೂ 50 ವರ್ಷ ಕಟ್ಟಿ ಹಾಕಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಖರ್ಗೆ ಅವರನ್ನು ನಾವು ಕಟ್ಟಿ ಹಾಕಿದ್ದೇವೆ. ಕಟ್ಟಿ ಹಾಕುವ ಶಕ್ತಿ ಡಾ.ಉಮೇಶ್ ಜಾದವ್ ಅವರಿಗೆ ಇದೆ. ಜಾಧವ್ ಅವರ ಹೆಸರು ಕೇಳಿದ್ರೆ ಖರ್ಗೆಗೆ ನಡುಕ ಶುರುವಾಗಿದೆ ಎಂದು ವ್ಯಂಗ್ಯವಾಡಿದ್ರು.
ಖರ್ಗೆ ಅವರಿಗೆ ಚಳಿ ಜ್ವರ ಬಂದಿದೆ. ಜಾಧವ್ 1 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದರು.
ನಾನು ಹಾಗೂ ಮಾಲಿಕಯ್ಯ ಗುತ್ತೇದಾರ ಸೋಲಿನ ಪ್ರತಿಫಲವನ್ನು ಜಾಧವ್ ಅವರ ಗೆಲುವಿನಲ್ಲಿ ಕಾಣುತ್ತೇವೆ ಎಂದರು.
ಸಚಿವ ಪಿ.ಟಿ.ಪರಮೇಶ್ವರ ನಾಯಕ, ಬಂಜಾರ ಸಮುದಾಯದ ಜನರಿಗೆ ದುಡ್ಡು ಕೊಡಲು ಹೋದಾಗ ಜನ ಆಕ್ರೋಶ ಗೊಂಡು ಹಲ್ಲೆ ನಡೆಸಿದ್ದಾರೆ. ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಅವರ ಮೇಲೆ ಖರ್ಗೆ ಅವರು ಸಾಕಷ್ಟು ಕೇಸ್ ಹಾಕಿದ್ದಾರೆ ಎಂದು ದೂರಿದ್ರು.