2ನೇ ಹಂತದ ಚುನಾವಣೆ ಹಿನ್ನಲೆ; ರಾಜ್ಯದ ಎಲ್ಲೆಲ್ಲಿ ಎಷ್ಟು ಮತದಾನವಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ
ಮಂಗಳವಾರ, 23 ಏಪ್ರಿಲ್ 2019 (11:04 IST)
ಬೆಂಗಳೂರು : ಲೋಕಸಭೆಯ 2ನೇ ಹಂತದ ಚುನಾವಣೆಗೆ ರಾಜ್ಯದ 14 ಲೋಕಸಭೆ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ.
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ಕೊಪ್ಪಳ, ರಾಯಚೂರು, ಬೀದರ್, ಬಳ್ಳಾರಿ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗಿನ ಬಾಗಲಕೋಟೆ- ಶೇ. 6.83, ಶಿವಮೊಗ್ಗ-ಶೇ. 10.02, ಬಳ್ಳಾರಿ-ಶೇ. 7, ದಾವಣಗೆರೆ-ಶೇ 6, ಧಾರವಾಡ-ಶೇ. 11, ಬೆಳಗಾವಿ-ಶೇ. 7, ಉತ್ತರ ಕನ್ನಡ-ಶೇ. 8, ಹಾವೇರಿ-ಶೇ. 5.67, ಹುಬ್ಬಳ್ಳಿ ಶೇ. 11, ರಾಯಚೂರು ಶೇ 6, ಕೊಪ್ಪಳ ಶೇ. 7, ಯಾದಗಿರಿ ಶೇ. 4, ಗದಗ, ಶೇ. 6, ಬೀದರ್ ಶೇ. 6.23 ರಷ್ಟು ಮತದಾನವಾಗಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.