ನವದೆಹಲಿ: ದೆಹಲಿಯ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನಾಮಪತ್ರ ತಿರಸ್ಕೃತವಾಗುವುದರಿಂದ ಕೂದಲೆಳೆಯಲ್ಲಿ ಪಾರಾಗಿದ್ದಾರೆ.
ಗಂಭೀರ್ ಸಲ್ಲಿಸಿದ್ದ ನಾಮಪತ್ರದಲ್ಲಿ ಲೋಪದೋಷಗಳಿವೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಆದರೆ ಈ ದೂರು ಇದೀಗ ಅಮಾನ್ಯಗೊಂಡಿದೆ.
ಗಂಭೀರ್ ಸಲ್ಲಿಸಿದ್ದ ಅಫಿಡವಿಟ್ ಪೈಕಿ ಮೊದಲನೆಯದ್ದರಲ್ಲಿ ದಿನಾಂಕ 18-4-2019 ಎಂದು ತೋರಿಸಿದ್ದರೆ ಎರಡನೆಯ ಅಫಿಡವಿಟ್ ನಲ್ಲಿ 19-4-2019 ಎಂದು ನಮೂದಿಸಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಆದರೆ ಗಂಭೀರ್ ಲಾಯರ್ ಜತೆ ಚರ್ಚಿಸಿದ ಬಳಿಕ ಇದು ನೋಟರಿಯ ಸೀರಿಯಲ್ ನಂಬರ್ ಎಂದು ತಿಳಿದುಬಂದಿದ್ದು, ನಾಮಪತ್ರ ಅಂಗೀಕಾರವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ