ರಾಫೆಲ್ ಡೀಲ್ ವಿಚಾರವಾಗಿ ಕ್ಷಮೆ ಯಾಚಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯಿಂದ ಮತ್ತೊಂದು ವಿವಾದ

ಬುಧವಾರ, 24 ಏಪ್ರಿಲ್ 2019 (07:01 IST)
ನವದೆಹಲಿ: ರಾಫೆಲ್ ಡೀಲ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡು ಪ್ರಧಾನಿ ಮೋದಿಯನ್ನು ಚೌಕೀದಾರ್ ಚೋರ್ ಹೈ ಎಂದು ಕರೆದು ಕೋರ್ಟು ಮುಂದೆ ತಪ್ಪೊಪ್ಪಿಕೊಂಡ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.


ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ‘ಕೊಲೆಗಡುಕ ಅಮಿತ್ ಶಾ’ ಎಂದು ಸಂಬೋಧಿಸಿ ಮತ್ತೆ ವಿವಾದಕ್ಕೀಡಾಗಿದ್ದಾರೆ. ಮಧ್ಯಪ್ರದೇಶದ ಚುನಾವಣಾ ರ್ಯಾಲಿಯೊಂದರಲ್ಲಿ ರಾಹುಲ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

‘ಕೊಲೆಗಡುಕ ಅಮಿತ್ ಶಾ ವಾವ್... ನೀವು ಜಯ್ ಶಾ ಹೆಸರು ಕೇಳಿದ್ದೀರಾ? ಆತ ಮೂರೇ ತಿಂಗಳಲ್ಲಿ 50 ಸಾವಿರ ರೂ.ಗಳನ್ನು 80 ಕೋಟಿಗೆ ಏರಿಸಿಕೊಂಡ ಜಾದೂಗಾರ’ ಎಂದು ಅಮಿತ್ ಶಾ ಮತ್ತು ಅವರ ಪುತ್ರ ಜಯ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ ಅಮಿತ್ ಶಾರನ್ನು ಕೊಲೆಗಡುಕ ಎಂದಿದ್ದು ಹೊಸ ವಿವಾದ ಸೃಷ್ಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ