ಸುಮಲತಾ ಪರ ಪ್ರಚಾರ; ವೆಚ್ಚ ಜೆಡಿಎಸ್ ಲೆಕ್ಕಕ್ಕಾ? ಅಬ್ಬಾ..

ಶುಕ್ರವಾರ, 5 ಏಪ್ರಿಲ್ 2019 (16:53 IST)
ಸುಮಲತಾ ಪರ ಹಿತೈಷಿಗಳು, ಕಾಂಗ್ರೆಸ್ ಧ್ವಜ ಹಿಡಿದು ಪ್ರಚಾರ ಮಾಡುತ್ತಿದ್ದಾರೆ. ಆದರೆ ಮೈತ್ರಿ ಪಕ್ಷಗಳ ಅಭ್ಯರ್ಥಿಯ ಜೆಡಿಎಸ್ ವೆಚ್ಚದಲ್ಲಿ ಅದು ದಾಖಲಾಗ್ತಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ದಾಖಲಿಸಲಾಗಿದೆ ಅಂತ ಕೈ ಪಾಳೆಯದ ಎಂಎಲ್ ಸಿ ಹೇಳಿದ್ದಾರೆ.

ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ್ ಮಾತನಾಡಿದ್ರು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆ ಒಂದು ಕ್ರಾಂತಿಕಾರಿ ಪ್ರಣಾಳಿಕೆ.
ಬಿಜೆಪಿ ತನ್ನ ಈ ಹಿಂದಿನ ಪ್ರಣಾಳಿಕೆ ಅನುಷ್ಠಾನಕ್ಕೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.
ಸುಮಲತಾ ಪರ ಹಿತೈಷಿಗಳು, ಕಾಂಗ್ರೆಸ್ ಧ್ವಜ ಹಿಡಿದು ಪ್ರಚಾರ ಮಾಡುತ್ತಿದ್ದು, ಮೈತ್ರಿ ಅಭ್ಯರ್ಥಿ ಜೆಡಿಎಸ್ ವೆಚ್ಚದಲ್ಲಿ ದಾಖಲಾಗ್ತಿದೆ, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ದಾಖಲಿಸಲಾಗಿದೆ ಎಂದರು.

ವಿವಿಪ್ಯಾಟ್ ಮತದಾನ ಯಂತ್ರದ ಬಗ್ಗೆ ಸಂಶಯವಿದೆ.  ಬಿಜೆಪಿ ಪರ ಮತ ಹೋಗ್ತಿದೆ. ಇದರ ಬಗ್ಗೆಯೂ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ ಎಂದ ಅವರು, ವಿಜಯಪುರದಲ್ಲಿ ಲೋಕಸಭಾ ಚುನಾವಣೆಯಲ್ಲಿ ನಮ್ಮ ಮೈತ್ರಿಕೂಟದ ಅಭ್ಯರ್ಥಿ ಡಾ.ಸುನೀತಾ ಚವ್ಹಾಣ ಅತಿಹೆಚ್ಚು ಮತಗಳಿಂದ ಜಯಗಳಿಸಲಿದ್ದಾರೆ ಎನ್ನುವುದಕ್ಕೆ ನಿನ್ನೆಯ ಒಕ್ಕಟ್ಟಿನ ನಾಮಪತ್ರ ಸಲ್ಲಿಕೆ ಮೆರವಣಿಗೆಯೇ ಸಾಕ್ಷಿ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ