ಬಿಜೆಪಿಯವರು ಮೋದಿಯನ್ನೆ ನಂಬಿಕೊಂಡಿದ್ದಾರೆ. ಮೋದಿ ನಿರಂಕುಶ ಅಧಿಕಾರ ನಡೆಸುತ್ತಿದ್ದಾರೆ. ಎಮರ್ಜಮ್ಸಿ ಇಲ್ಲದೆ ನಿರ್ಬಂಧ ಹೇರಲಾಗುತ್ತಿದೆ. ಅಡ್ವಾಣಿ, ಜೋಷಿಯಂತಹ ನಾಯಕರನ್ನು ಮೂಲೆಗೆ ತಳ್ಳಲಾಗಿದೆ. ಇದು ಮೋದಿ ಸರ್ವಾಧಿಕಾರಿ ಧೋರಣೆ ತೋರಿಸುತ್ತದೆ. ಹೀಗಂತ ಕೈ ಪಾಳೆಯದ ಮುಖಂಡ ದೂರಿದ್ದಾರೆ.
ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದು, ರಾಜ್ಯದಲ್ಲಿ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ನಿರೀಕ್ದೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಕೋಲಾರದಲ್ಲಿ ನಿರೀಕ್ಷೆಗೂ ಮೀರಿ ಯಶಸ್ಸು ಸಿಗುತ್ತದೆ. ಮುನಿಯಪ್ಪ ಗೆಲುವು ದಾಖಲೆ ಬರೆಯಲಿದೆ.
ಬೆಂಗಳೂರು ದಕ್ಷಿಣದಲ್ಲಿ ಕಾಂಗ್ರೆಸ್ ಪರವಾಗಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಬೆಂ.ಕೇಂದ್ರದಲ್ಲಿಯೂ ರಿಜ್ವಾನ್ ಗೆ ಉತ್ತಮ ವಾತಾವರಣ ಇದೆ ಎಂದರು.
ಬಿಜೆಪಿಯವರು ಹಿಂದುತ್ವದ ಬದಲು ಭಾರತೀಯತೆಯ ಆಧಾರದಲ್ಲಿ ಚುನಾವಣೆ ಎದುರಿಸಬೇಕು. ಬಿಜೆಪಿ ಹಿಂದುತ್ವ, ಸೈನಿಕರ ತ್ಯಾಗದ ಹೆಸರಿನಲ್ಲಿ ಮತ ಪಡೆಯಲು ಬಯಸಿರುವ ಬಗ್ಗೆ ಚುನಾವಣಾ ಆಯೋಗ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕಿತ್ತು ಎಂದರು.