ಚಿಂಚೋಳಿ ಹಾಗೂ ಕುಂದಗೋಳದಲ್ಲಿ ಈವರೆಗೆ ಆದ ಮತದಾನವೆಷ್ಟು ಗೊತ್ತಾ?
ಭಾನುವಾರ, 19 ಮೇ 2019 (11:35 IST)
ಬೆಂಗಳೂರು : ಇಂದು ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಾದ ಚಿಂಚೋಳಿ ಹಾಗೂ ಕುಂದಗೋಳದಲ್ಲಿ ಉಪ ಚುನಾವಣೆ ನಡೆಯುತ್ತಿದೆ.
ಚಿಂಚೋಳಿಯಲ್ಲಿ ಇಂದು ಮುಂಜಾನೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾನ ಆರಂಭಗೊಂಡ ಎರಡು ತಾಸುಗಳಲ್ಲಿ 7.88 % ಮತದಾನವಾಗಿದೆ. ಈವರೆಗೆ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ.
ಕುಂದಗೋಳದಲ್ಲಿ ಇಂದು ಮುಂಜಾನೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಬೆಳಿಗ್ಗೆ 7 ರಿಂದ 9 ಗಂಟೆಯವರೆಗೆ ಶೇ.9.59 ರಷ್ಟು ಮತದಾನವಾಗಿದೆ. ಇದುವರೆಗೆ 10919 ಪುರುಷರು ಹಾಗೂ 7241 ಮಹಿಳೆಯರು ಸೇರಿದಂತೆ ಒಟ್ಟು 18,160 ಜನ ತಮ್ಮ ಮತ ಚಲಾಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.