ಲೋಕಸಭಾ ಚುನಾವಣೆ 2019: ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

ಗುರುವಾರ, 23 ಮೇ 2019 (09:27 IST)
ಬೆಂಗಳೂರು: ಲೋಕಸಭಾ ಮತ ಎಣಿಕೆ ಬಿರುಸಿನಿಂದ ಸಾಗಿದ್ದು, ಕರ್ನಾಟಕದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ, ದೇಶದಲ್ಲಿ ಎನ್ ಡಿಎ ಮೈತ್ರಿ ಕೂಟ ಮುನ್ನಡೆಯಲ್ಲಿದೆ.


ಕರ್ನಾಟಕದಲ್ಲಿ 28 ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್ 1 ಮತ್ತು ಜೆಡಿಎಸ್ 2 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಒಂದನೇ ಹಂತದ ಮತ ಎಣಿಕೆ ಮಕ್ತಾಯವಾದಾಗ ಮೈಸೂರಿನಲ್ಲಿ ಬಿಜೆಪಿ, ಮಂಡ್ಯದಲ್ಲಿ ಜೆಡಿಎಸ್, ತುಮಕೂರಿನಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ. ವಿಶೇಷವೆಂದರೆ ಬಿಜೆಪಿ ಭದ್ರಕೋಟೆ ದ.ಕನ್ನಡದಲ್ಲಿ ಬಿಜೆಪಿಗೆ ಅಲ್ಪ ಮುನ್ನಡೆ ಸಿಕ್ಕಿದೆಯಷ್ಟೇ.

 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ