ದೇವಸ್ಥಾನಕ್ಕೆ ನಾಯಿ ಹೋಗಬಹುದು, ಪರಿಶಿಷ್ಠರು ಹೋಗಬಾರದು: ಬಸವರಾಜ ರಾಯರೆಡ್ಡಿ

Krishnaveni K

ಸೋಮವಾರ, 6 ಅಕ್ಟೋಬರ್ 2025 (12:06 IST)
ಬೆಂಗಳೂರು: ಹಿಂದೂ ಧರ್ಮವೇ ಅಲ್ಲ, ಅದೊಂದು ಸಂಸ್ಕೃತಿ ಅಷ್ಟೇ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮತ್ತೆ ತಗಾದೆ ತೆಗೆದಿದ್ದಾರೆ.

ಈ ಹಿಂದೆ ಜಾತಿಗಣತಿ ವೇಳೆ ನಾನು ಹಿಂದೂ ಧರ್ಮ ಎಂದು ಹಾಕಲ್ಲ. ಯಾಕೆಂದರೆ ಹಿಂದೂ ಧರ್ಮವೇ ಅಲ್ಲ ಎಂದು ಹೇಳಿಕೆ ನೀಡಿ ಬಸವರಾಜ ರಾಯರೆಡ್ಡಿ ವಿವಾದಕ್ಕೀಡಾಗಿದ್ದರು. ಇದೀಗ ಮತ್ತೆ ಅಂತಹದ್ದೇ ಹೇಳಿಕೆ ನೀಡಿದ್ದಾರೆ.

ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ, ಅಲ್ಲಿ ಜಾತಿ ಆಧಾರದ ಮೇಲೆ ಜನರನ್ನು  ವಿಂಗಡಿಸಲಾಗಿದೆ. ದೇವಸ್ಥಾನಗಳಲ್ಲಿ ನಾಯಿ ನರಿ ಪ್ರವೇಶಿಸಬಹುದು. ಆದರೆ ಪರಿಶಿಷ್ಠ ಜಾತಿಯವರು ಪ್ರವೇಶಿಸಬಾರದು. ಜಾತಿಗಳನ್ನು ತಂದು ಧರ್ಮದಲ್ಲಿ ಅಸಮಾನತೆ ಸೃಷ್ಟಿಸಿದ್ದಾರೆ. ಇದೊಂದು ಮನುಷ್ಯರ ಮಾನಸಿಕ ರೋಗ. ಇದೇ ಕಾರಣಕ್ಕೆ ದೇಶದಲ್ಲಿ ಜೈನ ಧರ್ಮ, ಬೌದ್ಧ ಧರ್ಮ ಬಂತು. ಕ್ರಮೇಣ ಸಿಖ್ ಧರ್ಮವೂ ಬಂತು.  ನಾನು ಜಾತಿಗಣತಿಯಲ್ಲೂ ಜಾತಿ, ಧರ್ಮ ಬರೆಸಿಲ್ಲ. ನಾನು ಶರಣ ತತ್ವಗಳಲ್ಲಿ ನಂಬಿಕೆಯಿಟ್ಟವನು, ಕುರಾನ್ ತತ್ವಗಳನ್ನು ಅನುಸರಿಸುತ್ತಿದ್ದೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ