ಎಲ್ಲಿದ್ದೀಯಮ್ಮಾ ರಮ್ಯಾ? ಎಲ್ಲೋದ್ರು ನಿಮ್ಮ ಅಧ್ಯಕ್ಷರು? ನಟಿ ರಮ್ಯಾಗೆ ಶಿಲ್ಪಾ ಗಣೇಶ್ ಟಾಂಗ್

ಶುಕ್ರವಾರ, 24 ಮೇ 2019 (06:45 IST)

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೇರುವುದರೊಂದಿಗೆ ಇತ್ತ ಬಿಜೆಪಿ ನಾಯಕಿ, ಗೋಲ್ಡನ್ ಸ್ಟಾರ್ ಗಣೇ‍ಶ್ ಪತ್ನಿ ಶಿಲ್ಪಾ ಗಣೇಶ್ ಕಾಂಗ್ರೆಸ್ ನಾಯಕಿ ರಮ್ಯಾ ಕಾಲೆಳೆದಿದ್ದಾರೆ.

ಟ್ವಿಟರ್ ಮೂಲಕ ರಮ್ಯಾಗೆ ಶಿಲ್ಪಾ ಗಣೇಶ್ ಟಾಂಗ್ ನೀಡಿದ್ದಾರೆ. ‘ರಮ್ಯಾ ಎಲ್ಲಿದ್ದೀಯಮ್ಮಾ? ಎಲ್ಲಿ ನಿಮ್ಮ ಅಧ್ಯಕ್ಷ ರಾಹುಲ್ ಗಾಂಧಿ? ಎಲ್ಲಿ ನಿಮ್ಮ ಫೇಕ್ ಅಕೌಂಟ್ ಸೈನ್ಯ? ಎಲ್ಲಿ ನಿಮ್ಮ ತಲೆಬುಡವಿಲ್ಲದ ಟ್ವೀಟ್ ಗಳು? ಎಲ್ಲೋಯ್ತು ನಿಮ್ಮ ಆಧಾರವಿಲ್ಲದ ಆರೋಪಗಳು? ಅದಕ್ಕೇ ಹೇಳೋದು ಇನ್ನೊಬ್ಬರ ಬಗ್ಗೆ ಆಪಾದನೆ ಮಾಡೋ ಮೊದಲು ನಿಮ್ಮ ಬಗ್ಗೆ ತಿಳಿದಿರಬೇಕು ಅಂತ’ ಎಂದು ಶಿಲ್ಪಾ ಗಣೇಶ್ ಟಾಂಗ್ ಕೊಟ್ಟಿದ್ದಾರೆ.

 

ಇನ್ನು ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಟ ಪ್ರಕಾಶ್ ರೈಗೂ ಶಿಲ್ಪಾ ಗಣೇಶ್ ಟಾಂಗ್ ಕೊಟ್ಟಿದ್ದಾರೆ. ಈ ಚುನಾವಣೆ ಕಳೆದ ಮೇಲೆ ಮೋದಿ ಕೇವಲ ಸಂಸದರಷ್ಟೇ ಎಂದಿದ್ದ ಪ್ರಕಾಶ್ ರೈ ಈಗ ಠೇವಣಿಯನ್ನೂ ಉಳಿಸಿಕೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ