ಕೋಮುವಾದಿಗೆ ಶಕ್ತಿಗೆ ಅವಕಾಶ ಬೇಡ ಎಂದ ಕೈ ಪಡೆ

ಭಾನುವಾರ, 14 ಏಪ್ರಿಲ್ 2019 (16:12 IST)
ನಾನು ಮುಳಬಾಗಿಲು ಕ್ಷೇತ್ರದ ಮಗ. ಮಾಜಿ ಸಭಾಧ್ಯಕ್ಷ ವೆಂಕಟಪ್ಪನವರ ಮಗನೆಂದು ಗುರುತಿಸಿಕೊಳ್ಳುತ್ತೇನೆ ಹೊರತು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷನೆಂದು ಕರೆಯಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಪ್ರೊ.ರಾಜೀವ್ ಗೌಡ ಹೇಳಿದ್ರು.

ಕೋಲಾರದಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಪರಿವರ್ತನಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನ್ಯಾಯ್‌ಪ್ರಣಾಳಿಕೆಯಲ್ಲಿ ಎಲ್ಲ ವರ್ಗದವರಿಗೆ ಸಮಾನ ಯೋಜನೆ ನೀಡಲಾಗಿದೆ.‌ ರೈತರಿಗೆ ಪ್ರತ್ಯೇಕ ಬಜೆಟ್ ಘೋಷಿಸಲಿದ್ದೇವೆ.‌ ಕಾಂಗ್ರೆಸ್ ಪಕ್ಷದ ‌ಪ್ರಣಾಳಿಕೆ ದೇಶದ ಅಭಿವೃದ್ಧಿ ಸಾಧಿಸುವ ಪ್ರಣಾಳಿಕೆಯಾಗಿದೆ ಎಂದರು. ಕೋಲಾರದಲ್ಲಿ ಕೋಮುವಾದಿ ಶಕ್ತಿಗೆ ನಾವು ಅವಕಾಶ‌ಕೊಟ್ಟಿಲ್ಲ. ಪರಮೇಶ್ವರ್, ಕುಮಾರಸ್ವಾಮಿ ಕೋಲಾರಕ್ಕೆ ಇನ್ನೂ ಹೆಚ್ಚು ಕೊಡುಗೆಗಳನ್ನು‌ ನೀಡಲಿದ್ದಾರೆ ಎಂದರು.

ಶಾಸಕ ಕೃಷ್ಣಾರೆಡ್ಡಿ ಮಾತನಾಡಿ, ಈ ಬಾರಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರದಂತೆ‌ ತಡೆಯಲು ಜಾತ್ಯಾತೀತ ಶಕ್ತಿಗಳು ಒಗ್ಗೂಡುವ ಮೂಲಕ‌ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸಲಿವೆ ಎಂದರು.

ಬಿಜೆಪಿ ಶಾಸಕರು ಬಿಜೆಪಿಗೆ ಮತ ಹಾಕದೇ ಇರುವವರು ತಾಯಿಗಂಡರು ಎನ್ನುತ್ತಾರೆ. ಈಶ್ವರಪ್ಪ ಮುಸಲ್ಮಾನರಿಗೆ ಟಿಕೆಟ್ ಕೊಡಲು ಬಿಜೆಪಿ ಕಚೇರಿಯಲ್ಲಿ ಅವರು ಕಸ ಗುಡಿಸಬೇಕು ಎನ್ನುತ್ತಾರೆ. ‌ಗಡ್ಡಾ ಬಿಟ್ಟವರು, ಬುರ್ಖಾ  ಹಾಕಿಕೊಂಡವರು ಬೇಡ ಎನ್ನುವಂತಹ ಕೋಮುಸೌಹಾರ್ದ ಭಾವ ಕದಡುವ ಪ್ರಯತ್ನ‌ವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ