ಕಾಂಗ್ರೆಸ್ ಸೋಲನ್ನು ಕಂಡು ಬಲಿಯಾಯ್ತು ಕಾಂಗ್ರೆಸ್ ಅಧ್ಯಕ್ಷನ ಜೀವ
ಗುರುವಾರ, 23 ಮೇ 2019 (15:34 IST)
ಮಧ್ಯಪ್ರದೇಶ: ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ರತನ್ ಸಿಂಗ್ ಠಾಕೂರ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮತ ಎಣಿಕೆ ಕೇಂದ್ರಕ್ಕೆ ಬಂದಿದ್ದ ರತನ್ ಸಿಂಗ್ ಮತ ಎಣಿಕೆ ವೀಕ್ಷಣೆ ಮಾಡುತ್ತಾ ಮತ ಎಣಿಕೆ ಬಗ್ಗೆ ಮಾಹಿತಿ ಪಡೆಯುತ್ತಿರುವಾಗ ಹೃದಯಾಘಾತವಾದ ಹಿನ್ನಲೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.
ತಕ್ಷಣ ಅವ್ರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಅವರು ಆಗಲೇ ಸಾವನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.