ನೀವು ಹಾಸಿಗೆಯಲ್ಲಿಯೇ ಮಾಡಬಹುದಾದ ಐದು ವ್ಯಾಯಾಮಗಳು

ಮಂಗಳವಾರ, 18 ಏಪ್ರಿಲ್ 2017 (16:41 IST)
ನೀವು ಹಾಸಿಗೆಯ ಮೇಲೆ ಕುಳಿತು ನಿಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ. ನಂತರ ಕೈಗಳನ್ನು ಹಿಡಿದುಕೊಂಡು ನಿಧಾನವಾಗಿ ಐದು ಸೆಕೆಂಡುಗಳವರೆಗೆ ನಿಮ್ಮ ದೇಹದ ಎಡ ಕಡೆಗೆ ಬಾಗಿ. ನಂತರ ಮೂಲಸ್ಥಾನಕ್ಕೆ ಬನ್ನಿ. ನಂತರ ಅದರಂತೆ ಬಲಭಾಗದ ಕಡೆಗೆ ಬಾಗಬೇಕು. ಮೊದಲ ಬಾರಿ ಐದು ಬಾರಿ ಮಾಡಿದರೆ ಸಾಕು.  
ಸ್ಟ್ರೆಚಿಂಗ್ ತಾಲೀಮು ವ್ಯಾಯಾಮಕ್ಕಿಂತ ಮೊದಲು ಉತ್ತಮ ಮಾತ್ರವಲ್ಲ ದೇಹಕ್ಕೆ ಲಾಭದಾಯಕ. ನೀವು ಎದ್ದ ತಕ್ಷಣ ಮಾಡುವುದರಿಂದ ತುಂಬಾ ಲಾಭದಾಯಕವಾಗುತ್ತದೆ. ಇಂತಹ ಸರಳ ವ್ಯಾಯಾಮಗಳನ್ನು ನಿಮ್ಮ ಹಾಸಿಗೆಯಲ್ಲಿಯೇ ಮಾಡಬಹುದು. ಈ ವ್ಯಾಯಾಮದಿಂದ ನೀವು ಎದುರಿಸುತ್ತಿರುವ ಒತ್ತಡ ಮತ್ತು ನೀವು ಅನುಭವಿಸುತ್ತಿರುವ ಯಾವುದೇ ಸ್ನಾಯು ಸೆಳೆತದಿಂದ ದೂರವಿಡಬಹುದಾಗಿದೆ.

 
ನೀವು ಹೊಟ್ಟೆಯನ್ನು ಕೆಳಭಾಗದಲ್ಲಿರುವಂತೆ ಮಲಗಿ ನಿಧಾನವಾಗಿ ಕತ್ತು ಮೇಲಕ್ಕೇತ್ತಬೇಕು. ನಿಮ್ಮ ದೇಹದ ಭಾರ ಮುಂಗೈ ಮೇಲಿರಬೇಕು. ನಿಮಗೆ ಸಾಧ್ಯವಾದಷ್ಟರ ಮಟ್ಟಿಗೆ ಕತ್ತು ಎತ್ತರಿಸಿ ನಂತರ ಮೂಲ ಸ್ಥಾನಕ್ಕೆ ಬರಬೇಕು. ಅದರಂತೆ, ಆರಂಭದಲ್ಲಿ ಐದು ಬಾರಿ ಮಾಡಿದರೆ ದೇಹಕ್ಕೆ ಉತ್ತಮ.

 
ನೀವು ಬೆನ್ನು ನೆಲಕ್ಕೆ ತಾಗುವಂತೆ ಮಲಗಿ. ನಿಧಾನವಾಗಿ ನಿಮ್ಮ ಎದೆಯ ಬಳಿ ಮಂಡಿಗಳನ್ನು ತರಬೇಕು. ಮಂಡಿಗಳನ್ನು ಕೈಗಳಿಂದ ಹಿಡಿದುಕೊಳ್ಳಿ. ಇಪ್ಪತ್ತು ಸೆಕೆಂಡ್‌ಗಳ ಕಾಲ ಹಿಡಿದುಕೊಂಡ ನಂತರ ಕಾಲುಗಳನ್ನು ಮೂಲ ಸ್ಥಾನಕ್ಕೆ ತರಬೇಕು. ಇದೇ ರೀತಿ ಐದು ಬಾರಿ ಮಾಡಿದಲ್ಲಿ ಸೊಂಟದಲ್ಲಿರುವ ನೋವು ಮಾಯವಾಗಿ ಆರಾಮ ದೊರೆಯುತ್ತದೆ. 
 
ನೆಲಕ್ಕೆ ಬೆನ್ನು ತಾಗುವಂತೆ ಮಲಗಿ ನಿಮ್ಮ ಬಲಗಾಲನ್ನು ಮೇಲಕ್ಕೆ ಎತ್ತಿ ಹಿಡಿದು ಇಪ್ಪತ್ತು ಸೆಕೆಂಡ್‌ಗಳ ಕಾಲ ಎಡತೋಳಿನತ್ತ ಬಾಗಿಸಬೇಕು. ನಂತರ ಎಡಗಾಲನ್ನು ಹಿಡಿದು ಮೇಲಕ್ಕೆ ಎತ್ತಿ ಬಲತೋಳಿನತ್ತ ಬಾಗಿಸಬೇಕು. ಇದೇ ರೀತಿ ಆರಂಭದಲ್ಲಿ ಐದು ಬಾರಿ ಪುನರಾವರ್ತಿಸಿ.
 
ನೀವು ಹಾಸಿಗೆಯ ಮೇಲೆ ಕುಳಿತು ನಿಮ್ಮ ಕೈಗಳನ್ನು ಹಿಂಬಾಗದತ್ತ ಇರಿಸಿ. ನಿಮ್ಮ ಕೈಗಳು ಹಿಂಬಾಗದ ಹಿಂದಿರುವ ಕಾಲಿನತ್ತ ಇರಬೇಕು. ಕೈಗಳ ಮೇಲೆ ಒತ್ತಡ ಹಾಕಿ ಸೀಲಿಂಗ್ ಕಡೆಗೆ ನಿಮ್ಮ ಎದೆ ಮತ್ತು ಸೊಂಟವನ್ನು ಮೇಲಕ್ಕೆತ್ತಿ. ಹತ್ತು ಸೆಕೆಂಡುಗಳ ಕಾಲ ಹಾಗೆ ಮಾಡಿ ನಂತರ ನಿಧಾನವಾಗಿ ನಿಮ್ಮ ಮೂಲ ಸ್ಥಾನಕ್ಕೆ ಬನ್ನಿ. ಆರಂಭದಲ್ಲಿ ಐದು ಬಾರಿ ಮಾಡುವುದು ದೇಹಕ್ಕೆ ಆರೋಗ್ಯದಾಯಕ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ