ಆಫೀಸ್ನಲ್ಲಿ ನೀವ್ ಹೇಗಿಬೇಕು...? ಹೀಗಿದ್ರೆ ಚೆನ್ನ. ಅದಕ್ಕಾಗಿ ಇಲ್ಲಿದೆ 9 ಟಿಪ್ಸ್

ಶನಿವಾರ, 22 ಅಕ್ಟೋಬರ್ 2016 (14:39 IST)

ಬೆಂಗಳೂರು: ನೀವಿರುವ ಕಚೇರಿಯಲ್ಲಿ ನಿಮ್ಮ ಸ್ಥಾನ ಯಾವ ಸ್ಥಾನದಲ್ಲಿದೇ.. ಆ ಸ್ಥಾನವನ್ನು ಕಾಪಾಡಿಕೊಳ್ಳಲು ಹಾಗೂ ಅದಕ್ಕಿಂತ ಮೇಲ್ಮ ಟ್ಟಕ್ಕೆ ಹೋಗಲು ಕೆಲವು ಅಂಶಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗಾದ್ರೆ ಆ ನಿಮ್ಮ ಯಶಸ್ಸಿಗೆ ಇಲ್ಲಿದೆ ಕೆಲವು ಟಿಪ್ಸ್....
 


 

ಟೀಮ್ ಜೊತೆ ಸಾಧಿಸಿ

ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಹೀಗಾಗಿ ಆಫೀಸ್ನಲ್ಲಿ ಸಾಧ್ಯವಾದಷ್ಟು ಕಲೀಗ್ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ.  ಇದರಿಂದ ಯಶಸ್ಸಿನ ಪ್ರತಿಯೊಂದು ಹಂತದಲ್ಲೂ ಬೆಳವಣಿಗೆಗೆ ಸಾಕಾರವಾಗಲಿದೆ. ಒಂದೊಳ್ಳೆ ಟೀಮ್ ಇದ್ದರೆ ಅದಕ್ಕಿಂತ ಹೆಚ್ಚಿನದ್ದೇನು ಬೇಕಿಲ್ಲ. ಎಂಥಾ ಕೆಲಸ ವಿದ್ದರೂ ಸಾಧಿಸಿ, ಇನ್ ಟೈಮಲ್ಲಿ ನೀಡಬಹುದು. 

 

ತುಂಬಾ ಪ್ರಾಕ್ಟಿಕಲ್ ಆಗಿರಿ 

ಪ್ರಸೆಂಟ್ ಸಿಚುವೇಶನ್ ಹೇಗಿದೆ ಅಂದ್ರೆ, ಯಾವುದೇ ಕಂಪನಿಯು ಇದೀಗ ತನ್ನ ಸೇವೆ ಪಡೆಯುತ್ತಿರುವವರೊಂದಿಗೆ ಫೀಡ್ಬ್ಯಾಕ್ ಪಡೆಯುತ್ತಿದೆ. ಅದರ ಜೊತೆ ನೀವು ಕಂಪನಿಯ ಭಾಗವಾಗಿರುವುದರಿಂದ, ಸಂಸ್ಥೆಯವರು ನಮ್ಮ ಕಾರ್ಯದ ಮೇಲೆ ತೀರಾ ಭರವಸೆ ಇಟ್ಟಿರುತ್ತಾರೆ ಅದೆಲ್ಲವನ್ನು ಸರಿಯಾಗಿ ನಿಭಾಯಿಸಬೇಕಾದರೆ ಪ್ರಾಕ್ಟಿಕಲ್ ನಾಲೆಡ್ಜ್ ಇರಲೇಬೇಕು.  

 

ಮಾತು ಕಡಿಮೆಯಿರಲಿ

ಮಾತು ಮನೆ ಕೆಡಿಸಿಂತು ತೂತು ಒಲೆ ಕೆಡಿಸಿತು. ಅನ್ನೋ ಗಾದೆಯಂತೆ ನಾವು ಕೆಲಸ ಮಾಡೋ ಸ್ಥಳದಲ್ಲಿ ಮಾತು ಕಡಿಮೆ ಇದ್ದರೆ ಒಳಿತು. ಜೊತೆಗೆ ಉಪಯೋಗಕ್ಕೆ ಬಾರದ ಮಾತು ನಿಮ್ಮ ಮೌಲ್ಯವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಆಫೀಸ್ನಲ್ಲಿ ನಿಮ್ಮ ಬಗ್ಗೆ ಇರುವ ಇಂಪ್ರೆಸ್ ಬ್ಯಾಡ್ ಇಂಪ್ರೆಸ್ ಆಗಿ ತಿರುಗುತ್ತದೆ. 

 

ಗಾಸಿಪ್ಗೆ ಕಿವಿಗೊಡಬೇಡಿ

ನಿಮ್ಮ ದಿನದಿಂದ ದಿನಕ್ಕೆ ಮೇಲಕ್ಕೆರುತ್ತಿದ್ದೀರಿ. ಉನ್ನತ ಸ್ಥಾನಕ್ಕೆಹೋಗುತ್ತಿದ್ದೀರಿ ಅಂದರೆ ಅದನ್ನು ಸಹಿಸಿಕೊಳ್ಳಲಾಗದ ಕೆಲವರು ಇಲ್ಲಸಲ್ಲದ ಗಾಸಿಪ್ಗಳನ್ನು ಹರಿಬಿಡುತ್ತಿರುತ್ತಾರೆ. ಇಂತಹ ವಿಷಯಗಳಿಂದ ಹಾಗೂ ಗಾಸಿಪ್ ಮಾಡೋ ವ್ಯಕ್ತಿಗಳಿಂದ ಸಾಧ್ಯವಾದಷ್ಟು ದೂರವಿರಿ. 

 

ಚಟಕ್ಕೆ ದಾಸರಾಗಬೇಡಿ

ಕಚೇರಿ ನಿಮ್ಮದೇ, ಬಾಸ್ ನಿಮ್ಮವರೇ ಹಾಗಂತ ಕುಡಿದು ಕಚೇರಿಗೆ ಬರುವುದು ದೊಡ್ಡ ತಪ್ಪು. ಹಾಗಾಗಿ ಇಂತಹ ಚಟಗಳು ನಿಮ್ಮ ವೈಯಕ್ತಿಕ ಜೀವನ ಹಾಗೂ ಸಂಸ್ಥೆ ಜೊತೆಗಿನ ಬಾಂಧವ್ಯಕ್ಕೆ ಪೆಟ್ಟು ಬೀಳುತ್ತದೆ. ಸಾಧ್ಯವಾದಷ್ಟು ಆಫೀಸ್ ಸಮಯ ಮುಗಿದನಂತರ ಇವೆಲ್ಲವನ್ನು ಮಾಡಬಹುದು.

 

ಮನೆಯ ಟೆನ್ಷನ್ ಆಫೀಸ್ನಲ್ಲಿ ಬೇಡ

ಹೆಂಡತಿ ಜೊತೆ ಜಗಳ, ಅತ್ತೆ ಮಾವನೊಂದಿಗೆ ಕಿರಿಕಿರಿ ಆದರೆ ಅಂತಹ ವಿಷಯಗಳನ್ನು ಮನೆಯಲ್ಲಿ ಬಿಟ್ಟು ಬನ್ನಿ. ಇಂತಹ ಘಟನೆಗಳು ನಿಮ್ಮ ಕೆಲಸಮಾಡುವ ವಾತಾವರಣದಲ್ಲಿ ಪ್ರತಿಕೂಲ ಪರಿಣಾಮ ಬಿರಬಹುದು. ಹೀಗಾಗಿ ಮನೆಯ ವಿಷ್ಯ ಮನೆಯಲ್ಲಿಯೇ ಇರಲಿ. ಮುಖ್ಯವಾಗಿ ಮನೆಯಿಂದ ಕರೆ ಬಂದರೆ ಚೂರು ದೂರಹೋಗಿ ಯಾರಿಗೂ ಡಿಸ್ಟರ್ಬ್ ಆಗದಂತೆ ಮಾತನಾಡಿ ಮರಳಿ ಬನ್ನಿ.

 

ಸಿಟ್ಟು ಸೆಡವು ದೂರವಿಡಿ

ಸಣ್ಣ ಸಣ್ಣದ್ದಕ್ಕೂ ಸೆಟ್ಟು ಮಾಡಿಕೊಳ್ಳುವುದು ಅಪಾಯಕಾರಿ. ಪ್ರತಿಯೊಂದು ಹಂತದಲ್ಲೂ ಅವುಗಳನ್ನು ನಿಯಂತ್ರಣದಲ್ಲಿಕೊಳ್ಳಿ. ಜೊತೆಗೆ ಸಾಧ್ಯವಾದಷ್ಟು ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಇರಿ. ನಿಮ್ಮ ಟಾರ್ಗೆಟ್ ರೀಚ್ ಆಗದೇ ಹೋದ್ರೆ ಟೆನ್ಷನ್ ಆಗದೇ,ಟಾರ್ಗೆಟ್ ರೀಚ್ ಆಗುವ ಬಗೆ ಅರಿಯಿರಿ.

 

ಓವರ್ ಶೇರಿಂಗ್ ಬೇಡ್ವೆ ಬೇಡ

ಇದೀಗ ಎಲ್ಲರ ಕಡೆಯೂ ಸ್ಮಾರ್ಟ್ ಫೋನ್ ಇದೆ. ಆಗಂತೆ ಅದರಿಂದ ಅನಾನುಕೂಲವು ಹೆಚ್ಚಿದೆ.  ಹೀಗಿರುವಾಗ ಎಲ್ಲವಿಷಯಗಳನ್ನು ಯಾವುದೇ ಕಾರನಕ್ಕೂ ವಾಟ್ಸ್ಆಪ್, ಫೇಸ್ಬುಕ್, ಟ್ವಿಟ್ಟರ್ನಲ್ಲಿ ಎಲ್ಲವನ್ನು ಶೇರ್ ಮಾಡಬೇಡಿ. ಕೆಲವೊಂದಿಷ್ಟು ಕಾನ್ಫಿಡೆನ್ಶಿಯಲ್ ಇರುವುದರಿಂದ ಅಂತಹವುಗಳ ತಂಟೆಗೆ ಹೋಗದಿರುವುದೆ ಒಳಿತು.

 

ಲೇಜಿನೆಸ್ ಬಿಟ್ಹಾಕಿ

ಆಫೀಸ್ನಲ್ಲಿ ಲವಲವಿಕೆಯಿಂದಿರಿ, ಖುಷಿ ಖುಷಿಯಾಗಿ ಎಲ್ಲರೊಂದಿಗೆ ಸಂವಹನ ಮಾಡಿ. ಆಫೀಸ್ ಕೆಲಸದಲ್ಲಿ ನೀವು ಲೇಜಿನೆಸ್ ತೋರಿದರೆ ಅದು ನಿಮ್ಮ ಡಿಮೋಶನ್ ಅಂತಲೇ ಅರ್ಥ. ಹೀಗಾಗಿ ಕೊಟ್ಟ ಕೆಲಸವನ್ನು ನೀಟಾಗಿ ಮಾಡಿ, ಬಾಸ್ ಕಡೆಯಿಂದ ಶಹಬ್ಬಾಶ್ ಗಿರಿ ಪಡೆಯಿರಿ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ