ಮೊದಲ ಮಿಲನದಲ್ಲಿಯೇ ಗರ್ಭಧರಿಸುತ್ತಾರೆಯೇ..?

ಸೋಮವಾರ, 26 ಡಿಸೆಂಬರ್ 2016 (15:52 IST)
ಬೆಂಗಳೂರು: ಮೊದಲ ಮಿಲನದಲ್ಲಿಯೇ ಗರ್ಭ ಧರಿಸುತ್ತಾರೆಯೇ..? ನವ ಜೋಡಿಯನ್ನು ಮೊತ್ತ ಮೊದಲು ಕಾಡುವ ಪ್ರಶ್ನೆಯಿದು. ಈ ಪ್ರಶ್ನೆಗೆ ಉತ್ತರ ಹೌದು ಅಥವಾ ಇಲ್ಲ ಎರಡೂ ಆಗಿರಬಹುದು.

ಮದುವೆಯ ಹೊಸತರಲ್ಲಿ ಗಂಡು, ಹೆಣ್ಣು ಇಬ್ಬರಲ್ಲೂ ಕೌತುಕ, ಆತಂಕ ಸಹಜವಾಗಿಯೇ ಮನೆ ಮಾಡಿರುತ್ತದೆ. ಮೊದಲ ರಾತ್ರಿಯಲ್ಲಿ ಹೇಗಿರಬೇಕು, ಏನೇನು ಮಾಡಬೇಕು ಎನ್ನುವಂತ ಅಳುಕು ಇಬ್ಬರಲ್ಲೂ ಸಹಜ. ಅದರ ನಡುವೆಯೇ ಮೊದಲ ಮಿಲನವಾದಾಗಲೇ ಗರ್ಭಧಾರಣೆ ಆಗುತ್ತದೆಯೇ ಎನ್ನುವುದು ಇಬ್ಬರನ್ನೂ ಕಾಡುತ್ತದೆ.
 
ಮೊದಲ ಮಿಲನದಲ್ಲಿ ಗರ್ಭ ಧರಿಸುವುದು, ಬಿಡುವುದು ಹೆಣ್ಣಿನ ಋತುಸ್ರಾವವನ್ನು ಅವಲಂಬಿಸಿರುತ್ತದೆ. ಅದಕ್ಕನುಗುಣವಾಗಿ ಗರ್ಭಧರಿಸುತ್ತಾರೆ. ಋತುಸ್ರಾವದ ಪೂರ್ವ ಅಂದರೆ ಒಂದುವಾರ ಮೊದಲು ಮದುವೆಯಾಗಿ ಮಿಲನವಾದರೆ ಗರ್ಭಧಾರಣೆ ಆಗುವ ಸಾಧ್ಯತೆ ತೀರಾ ಕಡಿಮೆ. ಯಾಕೆಂದರೆ ಗಂಡಿನ ವೀರ್ಯ ಹೆಣ್ಣಿನ ಅಂಡಾಣುವಿನೊಂದಿಗೆ ಸೇರದೆ ಋತುಸ್ರಾವದ ಮೂಲಕ ಹೊರ ಬರುತ್ತದೆ. ಋತುಸ್ರಾವವಾದ ನಂತರ ಮಿಲನ ಹೊಂದಿದರೆ ಅಂಡಾಣು ಹಾಗೂ ವೀರ್ಯ ಸೇರಿ ಹೆಣ್ಣು ಗರ್ಭ ಧರಿಸುತ್ತಾಳೆ.
 
ಈ ಕಾರಣಕ್ಕಾಗಿಯೇ ಬಹುತೇಕರು ಹೆಣ್ಣಿಗೆ ಋತುಸ್ರಾವದ ನಂತರ ಮದುವೆ ಮಾಡಿಸುತ್ತಾರೆ.

ವೆಬ್ದುನಿಯಾವನ್ನು ಓದಿ