Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Krishnaveni K

ಭಾನುವಾರ, 13 ಏಪ್ರಿಲ್ 2025 (14:38 IST)
ಕೂದಲು ಸಮಸ್ಯೆಯಿಂದ ಬಳಲುತ್ತಿರುವವರು ಈ ಒಂದು ಜ್ಯೂಸ್ ಮಾಡಿ ತಲೆ ಸ್ನಾನದ ಕೊನೆಯಲ್ಲಿ ಹಚ್ಚಿಕೊಂಡರೆ ಉದುರುವಿಕೆ, ತಲೆಹೊಟ್ಟು ಸೇರಿದಂತೆ ಅನೇಕ ಸಮಸ್ಯೆಗಳು ದೂರವಾಗುತ್ತದೆ.

ಕೂದಲ ಸಮಸ್ಯೆಗೆ ಕೊತ್ತಂಬರಿ ಸೊಪ್ಪು
ಕೂದಲಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಗುಣ ಕೊತ್ತಂಬರಿ ಸೊಪ್ಪಿನಲ್ಲಿದೆ. ಇದರ ಜ್ಯೂಸ್ ನ್ನು ಸ್ನಾನದ ಕೊನೆಯಲ್ಲಿ ಕಂಡೀಷನರ್ ಥರಾ ಹಚ್ಚಿಕೊಂಡರೆ ಕೂದಲು ಉದುರುವಿಕೆ, ತಲೆಹೊಟ್ಟು, ಸೀಳು ಕೂದಲು ಸಮಸ್ಯೆ ನಿವಾರಿಸುವುದಲ್ಲದೆ ಕೂದಲಿನ ಬುಡ ಗಟ್ಟಿಗೊಳಿಸುತ್ತದೆ.

ಕೊತ್ತಂಬರಿ ಸೊಪ್ಪು ಜ್ಯೂಸ್ ಮಾಡುವುದು ಹೇಗೆ?
ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಒಂದು ಬೌಲ್ ನಲ್ಲಿ ಹಾಕಿ ನೀರಿನಲ್ಲಿ ನೆನೆಸಿಡಿ. ಈ ರೀತಿ ಒಂದು ರಾತ್ರಿಯಿಡೀ ನೀರಿನಲ್ಲಿ ನೆನೆ ಹಾಕಿದ ಬಳಿಕ ಬೆಳಿಗ್ಗೆ ನೀರಿನ ಸಮೇತ ನುಣ್ಣಗೆ ರುಬ್ಬಿ ಸೋಸಿಕೊಳ್ಳಿ. ಈ ರಸವನ್ನು ಸ್ನಾನದ ಕೊನೆಯಲ್ಲಿ ಕೊಂಚ ತಲೆಗೆ ಹಚ್ಚಿ ಮಸಾಜ್ ಮಾಡಬೇಕು. ಈ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ಕೂದಲು ಆರೋಗ್ಯ ಚೆನ್ನಾಗಿ ಆಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ