ಮೊಟ್ಟೆಗಳನ್ನು ಸಸ್ಯಾಹಾರಿಗಳು ತಿನ್ನಬಹುದಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ

ಮಂಗಳವಾರ, 3 ಜುಲೈ 2018 (15:56 IST)
ಮೊಟ್ಟೆ ಮಾಂಸಹಾರಿ ಎಂದು ಪರಿಗಣಿಸಿ ಸಸ್ಯಹಾರಿಗಳು ಇದನ್ನು ಸೇವಿಸುವುದಿಲ್ಲ. ಆದರೆ ವಿಜ್ಞಾನಿಗಳು ಮೊಟ್ಟೆ ಪೂರ್ಣ ಸಸ್ಯಾಹಾರಿ ಎಂದು ಹೇಳುವ ಮೂಲಕ ಈ ಗೊಂದಲಕ್ಕೆ ತೆರೆಎಳೆದಿದ್ದಾರೆ.
ನಾವು ಪ್ರತಿದಿನವೂ ಸೇವಿಸುವ ಮೊಟ್ಟೆಗಳಲ್ಲಿ ಭ್ರೂಣಗಳು ಇರುವುದಿಲ್ಲ. ಅಂದರೆ ಒಂದು ಜೀವಂತ ಪಕ್ಷಿ/ಪ್ರಾಣಿಯನ್ನು ತಿನ್ನುವ ಹಂತದಷ್ಟು ಅಭಿವೃದ್ಧಿ ಹೊಂದಿರುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. 
 
ಕೋಳಿ ತನ್ನ ಮೊಟ್ಟೆಗಳನ್ನು ಇಡುವ  ಮೊದಲು ಸಂಭೋಗದ ಅನಿವಾರ್ಯತೆಯೇನಿಲ್ಲ. ಹಾಗಾಗಿ ಈ ಮೊಟ್ಟೆಗಳನ್ನು ಫಲವತ್ತಾಗಿಸದ ಮೊಟ್ಟೆಗಳು ಎಂದು ಕರೆಯಲಾಗುತ್ತದೆ. ಹಾಗಾಗಿ ನಾವು ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುವ ಮೊಟ್ಟೆಗಳು ಹೆಚ್ಚಾಗಿ ಫಲವತ್ತತೆ ಹೊಂದಿರದಾಗಿರುತ್ತವೆ. ಹಾಗಾಗಿ ಮೊಟ್ಟೆಯನ್ನು ಸಸ್ಯಾಹಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ