ಹವಾನಿಯಂತ್ರಕ ಕೊಠಡಿಯಲ್ಲಿ ಚಾವಡಿಗೆ ನೇತು ಹಾಕಿದ ತೆಳುವಾದ ರೇಷ್ಮೆಯ ಹಗ್ಗದಲ್ಲಿ ನೇತಾಡುತ್ತಾ, ಬಗೆಬಗೆಯ ದೈಹಿಕ ಕಸರತ್ತು ಮಾಡುತ್ತಾ, ದೇಹವನ್ನು ಗಾಳಿಯಲ್ಲಿ ತೇಲಿ ಬಿಡುತ್ತಾ, ದೇಹದ ಮೇಲೆ ನಿಯಂತ್ರಣ ಸಾಧಿಸುವುದೇ ಈ ಜೋಕಾಲಿ ಯೋಗ. ಗಾಳಿಯಲ್ಲಿಯೇ ಬಗೆಬಗೆಯ ಯೋಗದ ಆಸನಗಳನ್ನು ಮಾಡಲು ಭಿನ್ನವಾದ ಪ್ರಯತ್ನ ಮಾಡುವುದು. ಸುಮಾರು 300ಕಿ. ಲೋ ಗ್ರಾಂವರೆಗೆ ಭಾರವನ್ನು ತಡೆದುಕೊಳ್ಳುವ ಈ ರೇಷ್ಮೆಯ ಬಟ್ಟೆಯನ್ನು ಉಯ್ನಾಲೆಯ ರೀತಿಯಲ್ಲಿ ನೇತು ಹಾಕಿ, ಅದರ ಸಹಾಯದಿಂದ ದೇಹದ ಮೇಲೆ ನಿಯಂತ್ರಣ ಸಾಧಿಸಿ ದೈಹಿಕ ಕಸರತ್ತಿನ ಜೊತೆ ಯೋಗವನ್ನು ಲೀನ ಮಾಡುವ ಕ್ರಿಯೆ ಇದು.
1991ರಲ್ಲಿ ನ್ಯೂಯಾರ್ಕ್ ನಲ್ಲಿ ಈ ಹೊಸಬಗೆಯ ಯೋಗ ಆರಂಭವಾಯಿತು. ಇತ್ತೀಚಿನ ದಿನಗಳಲ್ಲಿ ಈ ಯೋಗಕ್ಕೆ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದು, ಕ್ರಮೇಣ ಜರ್ಮನಿ, ಹಾಂಕಾಂಗ್, ಇಟಲಿ, ಆಸ್ಟೇಲಿಯ ಹೀಗೆ ಜಗತ್ತಿನ ಎಲ್ಲೆಡೆ ಪಸರಿಸಿದೆ. ಅಷ್ಟೇ ಅಲ್ಲ ದೆಹಲಿ, ಮುಂಬಯಿ, ಚೆನೈ, ಬರೋಡಾ, ಕೊಲ್ಕತಾ, ಬೆಂಗಳೂರು ಹೀಗೆ ನಮ್ಮ ದೇಶದಲ್ಲಿ ಕೂಡ ಈ ಹ್ಯಾಂಗಿಂಗ್ ಯೋಗ ತನ್ನತ್ತ ಜರನ್ನು ಸೆಳೆಯುತ್ತಿದೆ. ಹಾಗಾಗಿ ಹೊಸಬಗೆಯದನ್ನು ಪ್ರಯತ್ನಿಸಬೇಕೆಂದರೆ ನೀವೂ ಕೂಡ ಈ ಜೋಕಾಲಿ ಯೋಗವನ್ನು ಮಾಡಬಹು.