ಬೆನ್ನುನೋವನ್ನು ನಿರ್ಲಕ್ಷಿಸದಿರಿ, ಪ್ರಾಣಕ್ಕೆ ಅಪಾಯ ಜೋಕೆ

ಶನಿವಾರ, 15 ಅಕ್ಟೋಬರ್ 2016 (15:15 IST)
ಈಗಿನ ಜೀವನ ಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲಿನಂತೆ ಯಾವುದು ನಿಯಮಬದ್ಧವಾಗಿ ನಡೆಯುತ್ತಿಲ್ಲ. ಅದರಿಂದ ಆಹಾರದ ಬಳಕೆ, ನಿದ್ರೆ ಹೋಗದಿರುವಿಕೆ, ರಾತ್ರಿ ಹಗಲಿನ ವ್ಯತ್ಯಾಸ ತಿಳಿಯದೆ ನಿದ್ರಿಸುವುದು ಹೀಗೆ ಅನೇಕ ಸಂಗತಿಗಳು ಈಗಿನ ಬದುಕಿನ ಪ್ರಮುಖ ಸಂಗತಿ. 
ಇದರಿಂದ ಮಾನಸಿಕ ಒತ್ತಡ, ಕಿರಿಕಿರಿಯಂತಹ ಸಮಸ್ಯೆಗಳು ಉಂಟಾಗುತ್ತದೆ. ಅಷ್ಟೇ ಅಲ್ಲದೆ ಅನೇಕ ಬಗೆಯ ಕಾಯಿಲೆಗಳಿಗೂ ಕಾರಣವಾಗುತ್ತಿದೆ ಇದರಿಂದ. ಅವುಗಳಲ್ಲಿ ಸೊಂಟದ ನೋವು ಸಹ ಒಂದಾಗಿದೆ. ಆಯುರ್ವೇದದಲ್ಲಿ ಕಟಿ ಶೂಲ ಎಂದು ಕರೆಯಲ್ಪಡುವ ಈ ಕಾಯಿಲೆಯನ್ನು ಅಲೋಪತಿ ವೈದ್ಯಕೀಯ ಪದ್ಧತಿಯಲ್ಲಿ ಸಯಾಟಿಕ ಎಂದು ಕರೆಯುತ್ತಾರೆ. ಇದು ಶೇ. 90 ರಷ್ಟು ಮಂದಿಯನ್ನು ಜೀವನದ ಒಮ್ಮೆಯಾದರು ಕಾಡಿರುತ್ತದೆ. 
 
ಕಾರಣಗಳು:
 
ಒಂದೇ ಭಂಗಿಯಲ್ಲಿ ಕುಳಿತುಕೊಂಡಿರುವುದು, ದಪ್ಪ, ಕಡಿಮೆ ಶ್ರಮದ ಕೆಲಸ , ತುಂಬಾ ತೂಕ ಹೊರುವುದು, ದ್ವಿಚಕ್ರ ವಾಹನದಲ್ಲಿ ದೀರ್ಘ ಪ್ರಯಾಣ ಮಾಡುವುದು, ಕಾರಿನಲ್ಲಿ ಸದಾ ಓಡಾಡುವುದು, ವಂಶ ಪಾರಂಪರ್ಯ, ರಸ್ತೆ ಅಪಘಾತದಿಂದ ಗಾಯ ಆಗಿ ಅದರ ದುಷ್ಪರಿಣಾಮ, ಹೀಗೆ ಅನೇಕ ಕಾರಗನಲು ಸಯಾಟಿಕ ನಮ್ಮನ್ನು ಬಾಧಿಸಲು ದಾರಿ ಮಾಡಿಕೊಡುತ್ತದೆ. 
 
ಈ ನೋವು ಆರಂಭದಲ್ಲಿ ವಾತದಿಂದ ನಿತಂಬ (ಅಂಡು) ಗಳ ಮೇಲ್ಭಾಗದಲ್ಲಿ ಜೋರಾಗಿ ನೋವು ಉಂಟು ಮಾಡಿ ಬಳಿಕ ಸೊಂಟ, ತೊಡೆ, ಮೊಣಕಾಲು , ಹಿಮ್ಮಡಿ, ಪಾದಗಳ ವರೆಗೂ ಹರಡುತ್ತದೆ. ಚಳಿಗಾಲದಲ್ಲಿ ಇದರ ತೀವ್ರತೆ ಅಧಿಕ. ಮುಖ್ಯವಾಗಿ ಸೊಂಟಕ್ಕೆ ಸಂಬಂಧಪಟ್ಟ 24 ಇಲ್ಲವೇ 25 ಎಸ್ 1 ಎಸ್ 2 ಬೆನ್ನು ಮೂಳೆಗಳ ನಡುವೆ ಉಂಟಾಗುವ ಒತ್ತಡದ ಪರಿಣಾಮ ಸೊಂಟದ ನೋವು ಉಂಟಾಗುತ್ತದೆ . 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ