ಬ್ರ್ಯಾಂಡೆಡ್ ಉಪ್ಪಿನಲ್ಲಿ ಜೀವ ತೆಗೆಯುವ ಸೈನೈಡ್ ಪತ್ತೆ

ಬುಧವಾರ, 26 ಜೂನ್ 2019 (16:14 IST)
ಒಂದು ವೇಳೆ ಊಟದಲ್ಲಿ ನೀವು ಉತ್ತಮ ಬ್ರ್ಯಾಂಡೆಡ್ ಉಪ್ಪು ಉಪಯೋಗಿಸುತ್ತಿದ್ದಲ್ಲಿ ಇಂದು ಬಹಿರಂಗವಾದ ಅಂಶ ನಿಮ್ಮನ್ನು ಆತಂಕಕ್ಕೆ ಈಡು ಮಾಡಲಿದೆ. ದೇಶದಲ್ಲಿಯೇ ಅತ್ಯುತ್ತಮ ಬ್ರ್ಯಾಂಡ್‌ ಉಪ್ಪು ಎಂದು ಕರೆಸಿಕೊಳ್ಳುವ ಕಂಪೆನಿಗಳು ಉಪ್ಪು ತಯಾರಿಕೆಯಲ್ಲಿ ಜೀವಕ್ಕೆ ಕುತ್ತು ತರುವ ವಿಷಕಾರಿ ಸೈನೈಡ್ ಬಳಸುತ್ತಿರುವುದು ಬಹಿರಂಗವಾಗಿದೆ.
ಭಾರತದಲ್ಲಿ ತಯಾರಿಸಲಾಗುವ ಬ್ರ್ಯಾಂಡೆಡ್ ಉಪ್ಪಿನಲ್ಲಿ ಜೀವಕ್ಕೆ ಸಂಚಕಾರ ತರುವ ಪೋಟಾಶಿಯಂ ಫೋರೋಸೈನೈಡ್‌ನಂತಹ ಕಾರ್ಸಿನೋಜೆನಿಕ್ ಮತ್ತು ವಿಷಕಾರಿ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿರುವುದು ಅಮೆರಿಕ ಲ್ಯಾಬರೋಟರಿ ಪತ್ತೆ ಮಾಡಿದೆ. ಭಾರತದಲ್ಲಿ ತಯಾರಿಸಲಾಗುವ ಉಪ್ಪಿನ ಬಗ್ಗೆ ಅಮೆರಿಕ ಪ್ರಯೋಗಾಲಯ ಸಂಪೂರ್ಣ ಪರೀಕ್ಷೆ ನಡೆಸಿ ವರದಿ ಸಿದ್ದಪಡಿಸಿದೆ. ದೇಶದ ಜನತೆಗೆ ಅತ್ಯುತ್ತಮ ಉಪ್ಪು ದೊರೆಯಬೇಕು ಎಂದು ಅಭಿಯಾನ ಹಮ್ಮಿಕೊಂಡಿರುವ ಕಾರ್ಯಕರ್ತರೊಬ್ಬರು ಮಾಹಿತಿ ರವಾನಿಸಿದ್ದಾರೆ.
 
ಗೋದುಂ ಗ್ರೇನ್ಸ್ ಆಂಡ್ ಫಾರ್ಮ್ಸ್ ಪ್ರೊಡೆಕ್ಟ್ಸ್‌ ಮುಖ್ಯಸ್ಥ ಶಂಕರ್ ಗುಪ್ತಾ ಪ್ರಕಾರ, ಅಮೆರಿಕದ ವೆಸ್ಟ್ ಎನಾಲಿಟಿಕಲ್ ಲ್ಯಾಬರೋಟರೀಸ್ ನಡೆಸಿದ ಪರೀಕ್ಷೆಯಲ್ಲಿ ದೇಶದ ಪ್ರಮುಖ ಬ್ರ್ಯಾಂಡೆಡ್ ಕಂಪೆನಿಗಳ ಉಪ್ಪು ತಯಾರಿಕೆಯಲ್ಲಿ ಶೇ.4,71 ರಿಂದ 1.90 ಮಿಲಿಗ್ರಾಂ ಪ್ರತಿ ಕೀಲೋಗ್ರಾಮ್‌ನಲ್ಲಿ ಪತ್ತೆಯಾಗಿದೆ 
 
ವಿಶ್ವದ ಯಾವುದೇ ದೇಶದಲ್ಲಿ ಉಪ್ಪು ಸೇರಿದಂತೆ ಯಾವುದೇ ಪದಾರ್ಥಗಳಲ್ಲಿ ಪೋಟಾಶಿಯಮ್ ಫೋರೋಸೈನೈಡ್ ಬೆರೆಸುವುದಕ್ಕೆ ಅನುಮತಿಯಿಲ್ಲ. ದೇಶದ ಉಪ್ಪು ತಯಾರಿಕೆಯಲ್ಲಿ ತೊಡಗಿರುವ ಖ್ಯಾತ ಕಂಪೆನಿಗಳು ಅಯೋಡಿನ್ ಮತ್ತು ಸೈನೈಡ್‌ನಂತಹ ವಿಷಕಾರಿ ವಸ್ತುಗಳನ್ನು ಬಳಸುತ್ತಿವೆ. ಇದರಿಂದ  ಕ್ಯಾನ್ಸರ್, ಹೈಪರ್‌ಥೆರೈಡಿಸಂ, ರಕ್ತದೊತ್ತಡ, ನಪುಂಸಕತೆ, ಸೇರಿದಂತೆ ಅನೇಕ ರೋಗಗಳಿಗೆ ತುತ್ತಾಗಬಹುದಾಗಿದೆ.
 
ಉಪ್ಪು ತಯಾರಿಕೆ ಘಟಕಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರ ಜೀವದೊಂದಿಗೂ ಕಂಪೆನಿಗಳು ಚೆಲ್ಲಾಟವಾಡುತ್ತಿವೆ. ದೇಶದಲ್ಲಿಯೇ ಖ್ಯಾತ ಉಪ್ಪು ತಯಾರಿಕೆ ಕಂಪೆನಿಗಳು ಭಾರತೀಯ ಆಹಾರ ಸುರಕ್ಷಾ ಪ್ರಾಧೀಕಾರದಿಂದ ಪರವಾನಿಗಿ ಪಡೆದಿಲ್ಲ ಎನ್ನುವುದು ಆರ್‌ಟಿಐ ಮೂಲಕ ಬಹಿರಂಗವಾಗಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಉಪ್ಪ ತಯಾರಿಕೆಯಲ್ಲಿ ಸೈನೈಡ್ ಅಂಶ ಎಷ್ಟಿದೆ ಎನ್ನುವುದರ ಬಗ್ಗೆ ಪತ್ತೆ ಮಾಡಲು ದೇಶದಲ್ಲಿ ಅಂತಹ ಯಾವುದೇ ಲ್ಯಾಬರೋಟರಿ ಇಲ್ಲ ಎನ್ನುವುದು. 
 
ಉಪ್ಪು ತಯಾರಿಕೆ ಕಂಪೆನಿಗಳ ಜಾಹೀರಾತಿಗೆ ಮರುಳಾಗಿ ನಮ್ಮ ಆರೋಗ್ಯವನ್ನೇ ಬಲಿಕೊಡುವಂತಹ ಪರಿಸ್ಥಿತಿ ಎದುರಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ