ಕೆಲವರಿಗೆ ಚಿಕ್ಕ ಗಾಯವಾಗಿದ್ದರೂ ಬೇಗನೇ ವಾಸಿಯಾಗುತ್ತಿಲ್ಲ ಎನಿಸಬಹುದು. ಸಾಮಾನ್ಯವಾಗಿ ಒಂದು ಚಿಕ್ಕ ಗಾಯ ಮಾಗಲು ಹೆಚ್ಚೆಂದರೆ ನಾಲ್ಕು ದಿನ ಹಿಡಿಯಬಹುದು. ಆದರೂ ಸರಿ ಹೋಗುತ್ತಿಲ್ಲ ಎಂದರೆ ಅದಕ್ಕೆ ಕಾರಣವೇನು ತಿಳಿದುಕೊಳ್ಳಿ.
ಗಾಯಗಳು ಬೇಗನೇ ವಾಸಿಯಾಗದೇ ಇರುವುದು ನಾರ್ಮಲ್ ಅಲ್ಲವೇ ಅಲ್ಲ. ಇದರ ಹಿಂದೆ ಬೇರೆಯದೇ ವೈದ್ಯಕೀಯ ಕಾರಣಗಳಿರುತ್ತವೆ. ಹೀಗಾಗಿ ಇಂತಹ ಸಂದರ್ಭ ಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ. ಇಲ್ಲದೇ ಹೋದರೆ ಮುಂದೆ ದೊಡ್ಡ ತೊಂದರೆಗಳನ್ನು ಎದುರಿಸಬೇಕಾಗಬಹುದು. ಹಾಗಂತ ಗಾಬರಿ ಬೇಡ.
ರಕ್ತ ಸಂಚಾರ ಕಡಿಮೆ
ಗಾಯವಾಗಿರುವ ಅಂಗಗಳಲ್ಲಿ ರಕ್ತ ಸಂಚಾರ ಕಡಿಮೆಯಾಗಿದ್ದರೆ ಇಂತಹ ಸಮಸ್ಯೆಯಾಗಬಹುದು. ಯಾಕೆಂದರೆ ರಕ್ತದಲ್ಲಿ ಅಂಗಾಂಶ ಪುನರ್ ನಿರ್ಮಾಣ ಮಾಡುವ ಆಮ್ಲಜನಕ ಮತ್ತು ಪೋಷಕಾಂಶಗಳಿರುತ್ತವೆ.
ಡಯಾಬಿಟಿಸ್
ಮಧುಮೇಹ ಅಥವಾ ಡಯಾಬಿಟಿಸ್ ಇದ್ದಾಗಲೂ ಗಾಯ ಬೇಗ ವಾಸಿಯಾಗಲ್ಲ. ಮಧುಮೇಹವಿದ್ದಾಗ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಮಧುಮೇಹ ಹೆಚ್ಚಾಗಿದ್ದಾಗ ಗಾಯ ವಾಸಿ ಮಾಡುವ ಬ್ಯಾಕ್ಟೀರಿಯಾ ನೈಸರ್ಗಿಕವಾಗಿ ಉತ್ಪತ್ತಿಯಾಗುವುದಿಲ್ಲ.
ಪೋಷಕಾಂಶದ ಕೊರತೆ
ಗಾಯ ಮಾಗಲು ವಿಟಮಿನ್ ಸಿ, ಝಿಂಕ್ ಅಂಶ ದೇಹದಲ್ಲಿ ಸಾಕಷ್ಟಿರಬೇಕು. ಈ ಅಂಶಗಳು ದೇಹದಲ್ಲಿ ಇಲ್ಲದೇ ಇದ್ದಾಗ ಚರ್ಮ ಕೂಡಿಕೊಳ್ಳುವುದು ನಿಧಾನವಾಗುತ್ತದೆ.