ರೋಮ್ಯಾನ್ಸ್ ಮಾಡಿದೋಳು ದೂರ ಆದಳಾ?

ಬುಧವಾರ, 7 ಆಗಸ್ಟ್ 2019 (14:14 IST)
ಪ್ರಶ್ನೆ: ಸರ್, ನಾನು ಯುವತಿಯೊಬ್ಬಳನ್ನು ತುಂಬಾ ಗಾಢವಾಗಿ ಪ್ರೀತಿ ಮಾಡುತ್ತಿರುವೆ. ನಾವು ಹಲವು ಬಾರಿ ರೋಮ್ಯಾನ್ಸ್ ಮಾಡಿದ್ದೇವೆ. ಆದರೆ ಈಚೆಗೆ ನಾವಿಬ್ಬರೂ ಗೋವಾಗೆ ಹೋಗಿದ್ದೇವೆ. ಅಲ್ಲಿನ ಲಾಡ್ಜ್ ನಲ್ಲಿ ತಂಗಿದ್ದಾಗ ತುಂಬಾ ಎಂಜಾಯ್ ಮಾಡಿದೆವು. ಆದರೆ ರಾತ್ರಿ ನನ್ನ ಹುಡುಗಿ ರೋಮ್ಯಾನ್ಸ್ ಮಾಡಿದ್ರೆ ಖುಷಿ ಪಡುತ್ತಾಳೆ.

ಆದರೆ ಅವಳೊಂದಿಗೆ ರತಿ ಸುಖ ಅನುಭವಿಸಬೇಕಾದರೆ ಅದಕ್ಕೆ ಮಾತ್ರ ನೋ ಅಂತಿದ್ದಾಳೆ. ನಿನಗೆ ಏನು ಬೇಕಾದರೂ ಮಾಡಿಕೋ ಆದರೆ ಗುಪ್ತಾಂಗ ಮಾತ್ರ ಟಚ್ ಮಾಡಬೇಡ ಅಂತಿದ್ದಾಳೆ. ಇದರಿಂದಾಗಿ ನಾನು ತುಂಬಾ ಡಿಪ್ರೆಸ್ ಆಗಿರುವೆ. ಅವಳೊಂದಿಗೆ ಜಗಳ ತೆಗೆದುಕೊಂಡು ವಾಪಸ್ ಬಂದಿರುವೆ. ಈಗ ಅವಳು ದೂರವಾಗುತ್ತಿದ್ದಾಳೆ. ಸಲಹೆ ತಿಳಿಸಿ.

ಉತ್ತರ: ನೀವು ನಿಜವಾಗಿ ಪ್ರೀತಿ ಮಾಡುತ್ತಿದ್ದಲ್ಲಿ ಹೀಗೆ ಚಿಂತಿಸೋದ್ರಲ್ಲಿ ಪ್ರಯೋಜನವಿಲ್ಲ. ಆ ಯುವತಿ ಹೀಗೆ ಮಾಡಿದ್ದರಲ್ಲಿ ತಪ್ಪು ಕಾಣುತ್ತಿಲ್ಲ. ಏಕೆಂದರೆ ಹರೆಯದಲ್ಲಿ ಮಾಡಿದ ತಪ್ಪಿಗೆ ಗರ್ಭ ಧರಿಸಿ ಮದುವೆಗೂ ಮೊದಲೇ ತೊಂದರೆ ಪಡುವುದು ಆಕೆಗೆ ಮಾತ್ರವಲ್ಲ, ಬಹುತೇಕ ವಿವೇಕವುಳ್ಳವರಿಗೆ ಇಷ್ಟ ಇರುವುದಿಲ್ಲ. ಪ್ರೀತಿ ಮಾಡುವುದು ದೊಡ್ಡದಲ್ಲ.

ಅದನ್ನು ಕೇವಲ ಕಾಮಕ್ಕಾಗಿ ಮಾತ್ರ ಪರಿಗಣಿಸಬೇಡಿ. ಒಳ್ಳೆಯ ಮನಸ್ಸಿನಿಂದ ಪ್ರೀತಿ ಮಾಡಿ ಮೊದಲು ಆಕೆಯನ್ನು ಮದುವೆಯಾಗಿ. ಆ ಬಳಿಕ ಆ ಯುವತಿ ನಿಮ್ಮ ಜತೆ ಸುಖವಾಗಿರುತ್ತಾಳೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ