ಮೂತ್ರದ ಸೋಂಕು ಇತ್ತೀಚೇಗೆ ಹಲವು ಮಂದಿಯನ್ನು ಕಾಡುತ್ತಿರುವ ದೈಹಿಕ ಸಮಸ್ಯೆ. ಆದರೆ ಗರ್ಭಿಣಿಯರಿಗೆ ಈ ಸೋಂಕು ನರಕಯಾತನೆ ನೀಡುತ್ತದೆ. ಬ್ಯಾಕ್ಟೀರಿಯಾ ಸೋಂಕಿನಿಂದ ಇದು ಕಾಣಿಸಿಕೊಳ್ಳುತ್ತದೆ. ಇದರಿಂದ ಕಿಡ್ನಿಗೂ ಹಾನಿಯಾಗುತ್ತದೆ. ಹಾಗಾಗಿ ಈ ಸೋಂಕು ತಗುಲದಂತೆ ಎಚ್ಚರದಿಂದ ವಹಿಸಬೇಕಾಗುತ್ತದೆ.
ಮೂತ್ರ ವಿಸರ್ಜನೆ ವೇಳೆ ಉರಿಯೂತ, ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು ಇವೆಲ್ಲವೂ ಮೂತ್ರದ ಸೋಂಕಿನ ಸಾಮಾನ್ಯ ಲಕ್ಷಣಗಳು. ಇದು ಹೆಚ್ಚಾಗಿ ಗರ್ಭಿಣಿಯರಿಗೆ ತಗುಲುವುದು ಸರ್ವೇ ಸಾಮಾನ್ಯವಾಗಿದೆ. ಮೂತ್ರದ ಸೋಂಕಿಗೆ ಕಾರಣಗಳು
1. ಗರ್ಭಿಣಿಯರು ಮೂತ್ರದ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ, ಏಕೆಂದರೆ ಅವರ ಮೂತ್ರದಲ್ಲಿ ಆಮ್ಲೀಯ ಅಂಶ ಇರುತ್ತದೆ ಮತ್ತು ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳು, ಪ್ರೋಟೀನ್ಗಳು ಮತ್ತು ಸಕ್ಕರೆ ಅಂಶ ತುಸು ಹೆಚ್ಚಾಗಿಯೇ ಇರುತ್ತದೆ.
2. ಯೋನಿ ಪ್ರದೇಶದ ಪಿಹೆಚ್ನಲ್ಲಿನ ಬದಲಾವಣೆಗಳು ಯೋನಿ ಬ್ಯಾಕ್ಟೀರಿಯಾವನ್ನು ಮೂತ್ರನಾಳಕ್ಕೆ ಪ್ರವೇಶಿಸಲು ಪ್ರೋತ್ಸಾಹಿಸುತ್ತದೆ. ನಂತರ ಕೆಲವೊಮ್ಮೆ ಮೂತ್ರದ ಸೋಂಕು ಬರುತ್ತದೆ.3. ಮಗುವನ್ನು ಪೋಷಿಸುವ ದೇಹದಲ್ಲಿನ ಹಾರ್ಮೋನುಗಳು ಬ್ಲಾಡರ್ ಚಲನೆಯನ್ನು ನಿಧಾನಗೊಳಿಸುತ್ತವೆ.
4. ಮಗು ಬೆಳೆದಂತೆ ಬ್ಲಾಡರ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆಗ ಮೂತ್ರ ವಿಸರ್ಜನಾ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ ಮತ್ತು ಮೂತ್ರಕೋಶದಲ್ಲಿ ಮೂತ್ರದ ಕುರುಹುಗಳು ಉಳಿಯುತ್ತದೆ. ಇದು ಮೂತ್ರದ ಸೋಂಕಿಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಮೂತ್ರನಾಳದ ಉದ್ದವು ಪುರುಷರಿಗಿಂತ ಚಿಕ್ಕದಾಗಿದೆ ಆದ ಕಾರಣ ಮಹಿಳೆಯರು ಯುಟಿಐಗೆ ಹೆಚ್ಚು ಒಳಗಾಗುತ್ತಾರೆ
5. ಕಡಿಮೆ ನೀರು ಕುಡಿಯುವುದು ಮೂತ್ರದ ಸೋಂಕಿಗೆ ಕಾರಣ
6. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿರುವುದು. ಮೂತ್ರದ ಸೋಂಕಿನ ಲಕ್ಷಣಗಳು
1. ಕೆಳಗಿನ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
2. ಮೂತ್ರ ವಿಸರ್ಜನೆ ವೇಲೆ ಉರಿಯೂತ
3. ಮೂತ್ರವೂ ತುಂಬಾ ವಾಸನೆ ಬರಲು ಪ್ರಾರಂಭವಾಗುತ್ತದೆ
4. ಮೂತ್ರದ ಬಣ್ಣ ಗಾಢ ಹಳದಿ ಬಣ್ಣಕ್ಕೆ ತಿರುಗಿರುತ್ತದೆ
5. ಮೂತ್ರದಲ್ಲಿ ರಕ್ತವೂ ಕಾಣಿಸಿಕೊಳ್ಳಬಹುದು ಕಿಡ್ನಿಗೆ ಸೋಂಕು ತಗುಲಿದಾಗ ಕಂಡು ಬರುವ ಲಕ್ಷಣಗಳು
ಮೂತ್ರದ ಸೋಂಕು ಕಿಡ್ನಿಗೂ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಚ್ಚರದಿಂದ ಇರಬೇಕಾಗುತ್ತದೆ. ಇಂತಹ ಸಮಯದಲ್ಲಿ ಜ್ವರ ಹೀಗೆ ಕೆಲವು ಲಕ್ಷಣಗಳು ಕಂಡು ಬರುತ್ತದೆ.
1. ಜ್ವರ
2. ಸೊಂಟದ ಪ್ರದೇಶದಲ್ಲಿ ಅಥವಾ ಬೆನ್ನಿನ ಪಕ್ಕೆಲುಬುಗಳ ಕೆಳಗೆ ನೋವು
3. ದಿನವಿಡೀ ವಾಕರಿಕೆ ಮತ್ತು ವಾಂತಿ
4. ಶೀತ ಸಹ ಕಂಡು ಬರುತ್ತದೆ ಮೂತ್ರದ ಸೋಂಕಿಗೆ ಚಿಕಿತ್ಸೆ ಏನು?
ಮೂತ್ರದ ಸೋಂಕು ಚಿಕ್ಕ ರೋಗ ಎಂದೆನಿಸಿದರೂ, ಗರ್ಭಧಾರಣೆ ವೇಳೆ ತೊಂದರೆ ತಂದೊಡ್ಡುವ ಸಾಧ್ಯತೆಗಳಿರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಚಿಕಿತ್ಸೆ ತೆಗೆದುಕೊಳ್ಳಬೇಕು. ಚಕಿತ್ಸೆಯು ಆಂಟಿ ಬಯೋಟಿಕ್ಸ್ ಹೊಂದಿರುತ್ತದೆ. ಇದು ತಾಯಿಗೂ ಮತ್ತು ಮಗುವಿಗೂ ಇಬ್ಬರಿಗೂ ಒಳ್ಳೆಯದು. ಆದರೆ ಎಂದಿಗೂ ಸ್ವಯಂ ಚಿಕಿತ್ಸೆಗೆ ಒಳಗಾಗಬಾರದು. ಆಂಟಿ ಬಯೋಟಿಕ್ಸ್ ಅನ್ನು ದುರುಪಯೋಗಪಡಿಸಿಕೊಳ್ಳಬೇಡಿ. ತೆಗೆದುಕೊಳ್ಳುವ ಮಾತ್ರೆಗಳನ್ನು ಸಂಪೂರ್ಣವಾಗಿ ಮುಗಿಸಬೇಕು. ಇದಕ್ಕೆ ಮಾತ್ರೆ ತೆಗೆದುಕೊಳ್ಳಲು ಇಚ್ಚಿಸಿದ ರೋಗಿಗಳು ಇಂಜೆಕ್ಷನ್ ಅನ್ನು ತೆಗೆದುಕೊಂಡು ಗುಣಪಡಿಸಿಕೊಳ್ಳಬಹುದು.
ಮೂತ್ರದ ಸೋಂಕಿನ ಪರಿಣಾಮ ಏನು?
1. ಅಕಾಲಿಕ ಮಗುವಿನ ಜನನ ಸಂಭವಿಸಬಹುದು
2. ಮಗುವಿನ ತೂಕ ಕಡಿಮೆಯಾಗುವ ಸಾಧ್ಯತೆ ಇರುತ್ತದೆ
3. ಸೋಂಕು ತಾಯಿಗೆ ಸಿಸ್ಟೈಟಿಸ್ ಅಥವಾ ಪೈಲೊನೆಫೆರಿಟಿಸ್ ಉಂಟಾಗಬಹುದು
4. ತಾಯಿಯ ರಕ್ತಹೀನತೆಗೆ ಕಾರಣವಾಗಬಹುದು
ಮೂತ್ರದ ಸೋಂಕು ತಡೆಗಟ್ಟುವುದು ಹೇಗೆ?
1. ಹೆಚ್ಚು ಹೆಚ್ಚು ದ್ರವ ಪದಾರ್ಥಗಳನ್ನು ಸೇವಿಸಿ. ಮುಖ್ಯವಾಗಿ ಯಥೇಚ್ಛವಾಗಿ ನೀರು ಕುಡಿಯಿರಿ
2. ಮೂತ್ರ ವಿಸರ್ಜನೆ ಮಾಡಬೇಕೆನಿಸಿದರೆ ತಕ್ಷಣವೇ ವಿಸರ್ಜಿಸಿ. ಹಿಡಿದಿಟ್ಟುಕೊಳ್ಳಬೇಡಿ
3. ದೇಹದ ಖಾಸಗಿ ಅಂಗವನ್ನು ಸ್ವಚ್ಛವಾಗಿಟ್ಟುಕೊಳ್ಳಿ
4. ಲೈಂಗಿಕ ಚಟುವಟಿಕೆಯ ಮೊದಲು ಅಥವಾ ನಂತರ ಮೂತ್ರ ವಿಸರ್ಜನೆ ಮಾಡಿ